ರಾಮ ರಾಮ ರಘುವೀರ Rama Rama Raghuveera

|| ಶ್ರೀರಾಮ ಸ್ತುತಿ ||

ರಾಗ - ಶಂಕರಾಭರಣ




ರಾಮ ರಾಮ ರಘುವೀರ |

ಕ್ಷೇಮವಿಧಾಯಕ ರಣಧೀರ ||

ರಾಮ ರವಿಕುಲಸೋಮ ಬುಧಜನ |

ಸೋಮವಂದಿತ ನಿಜಚರಣ ।ಪ


ಶಂಕರಪೂಜಿತ ಪದಯುಗಲ |

ಕಿಂಕರ ಪಾಲಿತ ಪುಷ್ಪಗಲ |

ಶಂಕಾಕೀಲಿತ ಲಂಕಾಪಾಲಕ |

ಕಂಕ ವಿನಾಶಕ ರಘುವೀರ ||೧||


ಸುಂದರ ಪೂಜಿತ ಕಲಕಂಠ |

ಮಂದರ ಪೂಜಿತ ಶಿತಿಕಂಠ |

ಮಂದಾನಿಲ ಮಕರಂದ ರಾಜಿತ |

ಕುಂದ ಸಮುಜ್ಜಲ ಮೃದುಕಂಠ ||೨||


ಶೃಂಗ ಸರೋರುಹ ನಿಭಗಾತ್ರ |

ತುಂಗ ವಿರಾಜಿತ ಗುಣಪಾತ್ರ ||

ಭ್ರುಂಗಿ  ಸಮುದಯ ಸಂಗೀತಾಗಮ |

ಸಂಗ ಸುಖಾನ್ವಿತ ರಘುವೀರ ||೩||


ಮೃಗಮದ ಸುರಭಿ ತಚಿಕುರಭರ |

ಖಗವರ ಸಂಸ್ತುತ ರಣಧೀರ ||

ಧೀರಾನತಜನವಾರ ಗುಣಗಣ |

ಪೂರ ಶುಭಕರ ರಣಧೀರ ||೪||


ದಿತಿಜಮತಂಗಜ ಹರಿರೂಪ |

ನತಸುರ ಭಂಜಿತ ಹರಚಾಪ ||

ಸೀತಾಕಚಕುಚ ನೇತ್ರಾಮೃತ ರಸ |

ನೀತ ಮುನಿಜನ ರಘುವೀರ |೫||


ಧೀರ ಧನುರ್ಧರ ರಣಲೋಲ |

ವಾರಿಧಿ ಬಂಧನ ಶುಭಲೀಲ ||

ಬಾಲಾ ಕರತಲ ಲೋಲಾ ಕೃತಿಧರ |

ಲೀಲ ವಂದಿತ ರಘುವೀರ ||೬||


ಕುಂಜರಪೀ ವರ ಭುಜ ಯುಗಲ |

ಮಂಜುಲ ರಾಜಿತ ಮುಖ ಕಮಲ ||

ಕಂಜಾಯುತ ಪದ ಸಿಂಜಾವರ ಯುತ |

ಗುಂಜಾಮಣಿ ಗಣಕೃತ ಚಾಪ ||೭||


ಪದ್ಮಸಮುದ್ಭವ ಶುಭವದನ |

ಪದ್ಮ ಶುಭಕರ ಮಹಿತಜನ ||

ಗರ್ವಾಚಲಗತ ಖರ್ವಾಸುರಗಣ |

ಗರ್ವಾನತಿಕರ ರಘುವೀರ ||೮||


ದಶರಥನಂದನ ರಘುವೀರ |

ಕೀಶಗಣಾನ್ವಿತ ಜಯಧೀರ |

ಸಾಶಾಯುತ ಮುಖ ದಾಶಾಧಿಪ ವರ |

ದೇಶಾ ನತವರ ಸೀತೇಶ ||೯||


ಮಧುಕರ ಮುಗ್ಧ ಕಟಾಕ್ಷ ಶಿಖ ।

ಮಧುರತರಾಧರ ಬಿಂಬಮುಖ॥

ರಾಕಾಹಿಮಕರಶೀತ ಸಂಶಯ ।

ವಾರಾಶಂಸನ ಸಖ ರಹಿತ ॥೧೦॥ 


ಚಂಡಪರಾಕ್ರಮಭುಜದಂಡ |

ಖಂಡಿತ ನಿಶಿಚರ ಗಣತುಂಡ ॥

ಚಂಡ ಮದಗಜ ಶುಂಡಾನಿಭ ಮನು ।

ದಂಡಾದೃತ ವರ ಕೋದಂಡ ॥೧೧॥ 


ಅದ್ರಿಜಾವಲ್ಲಭ ನುತನಾಮ |

ಭದ್ರ ರಘೂಜ್ವಲ ನಿಜಸೀಮ ॥

ಕ್ಷುದ್ರಾಸುರ ಗಣ ನಿದ್ರಾ ವಿತರಣ ।

ಭದ್ರಾ ಕೃತಿವರ ರಘುವೀರ ॥೧೨॥ 


ದಕ್ಷಮರುತ್ಸುತ ಕೃತಸೇವ ।

ಪಕ್ಬ ನಿಶಾಚರ ರಘುದೇವ ॥

ಋಕ್ಷಾಧಿಪವರ ವೀಕ್ಷಾ ವಿತರಣ |

ದೀಕ್ಷಾ ಕೃತಕರ ಕ್ಷಿತಿಪಾಲ ॥೧೩॥ 


ಘನ ಮದರಾವಣ ವಿನಿಹಂತ ।

ವನಚರ ಗಣವೃತ ಶುಭದಂತ ।

ಶಾಂತಕ್ಟಿತಿಜ್ವರ ಶಾಂತಾಸುರಗಣ |

ಶಾಂತ ಸಾಧಿಕ ಫಲದಾತಾ ॥೧೪॥ 


ಚಂಪಕ ಕುಡ್ಮಲ ಪರಿಮಿಲಿತ ।

ಕಂಪಿತ ನಿಜಚರ ಹರಿಮಿಲಿತ ॥

ಪಂಪಾತಟ ಶರ ಶಂಪಾನಿಭ ಸ್ವನು ।

ಕಂಪಾದೃತ ಕಪಿಜನವೀರ ॥೧೫॥ 


ಶ್ರೀಕರ ಶುಭಕರ ರಣಧೀರ |

ಶ್ರೀಕರ ಮೃದುಕರ ರಘುವೀರ ॥

ದಾತಾ ಶುಭಕರ ಗೀತ ಖಲು ಭುವಿ ।

ಸೀತಾಪತಿ ಮೃದು ಆಶ್ರಯ ಭೋಃ॥೧೬॥ 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು