|| ಶ್ರೀ ಕೃಷ್ಣ ಸ್ತುತಿ ||
ರಂಗ ಕುಣಿದ ಮುದ್ದು ರಂಗ ಕುಣಿದ
ರಂಗ ಕುಣಿದ ಮುದ್ದು ರಂಗ ಕುಣಿದ ||ಪ||
ರಂಗ ಕುಣಿದ ಗೋಪಿಕಂಗಳ ಮುಂದೆ
ಪೊಂಗೆಜ್ಜೆರವದೊಳು ಅಂಗಳದೊಳು ||೧||
ಗೆಳೆಯರೆಂದೆನಿಸುವ ಎಳೆಮಕ್ಕಳೊಗೂಡಿ
ಬಳುಕುತ ಬಾಗುತ ನಲಿನಲಿದಾಡಿ ||೨||
ಮೊಳೆವಲ್ಲು ಬಾಯಿಜೊಲ್ಲು ಗಿಳಿಸೊಲ್ಲಿನಿಂದಲಿ
ಕಳಕಲಿಸೀ ನಕ್ಕು ನಗುತ ಬಿದ್ದಿದ್ದು ||೩||
ಅರಳೆಲೆ ಮಾಗಾಯಿ ಬೆರಳ ಹೊನ್ನುಂಗುರ
ಕಿರುಗೆಜ್ಜೆ ಬಾರೆಂದು ತರಳರಿಗಿತ್ತು ||೪||
ನಗುತಲೆ ಮುದ್ದಿಸಿ ಬಿಗಿದಪ್ಪಲೆಶೋದೆ.....
ಯಶೋದೆ ಬಿಗಿದಪ್ಪಲು ನಗುತಲೆ ಮುದ್ದಿಸಿ
ಬಿಗಿದಪ್ಪಲೆಶೋದೆ ಮಗ
ಪ್ರಸನ್ವೆಂಕಟೇಶ ಚಿಗಿದುಡಿಯಲ್ಲಿ ||೫||
0 ಕಾಮೆಂಟ್‌ಗಳು