|| ಗಣಪತಿ ಸ್ತುತಿ ||
ಸತತ ಗಣನಾಥ ಸಿದ್ಧಿಯ ನೀವ ಕಾರ್ಯದಲಿ
ಮತಿ ಪ್ರೇರಿಸುವಳು ಪಾರ್ವತಿ ದೇವಿಯು ||ಪ||
ಮುಕುತಿ ಪಥಕೆ ಮಾನವೀವ ಮಹಾರುದ್ರ ದೇವರು
ಭಕುತಿ ದಾಯಕಳು ಶ್ರೀ ಭಾರತಿದೇವಿ ||೧||
ಯುಕುತಿ ಶಾಸ್ತ್ರಗಳಲಿ ವನಜಸಂಭವನರಸಿ
ಸತ್ಕರ್ಮಗಳ ನಡೆಸಿ ಸುಜ್ಞಾನ ಇತ್ತು
ಮತಿ ಪಾಲಿಸುವ ನಮ್ಮ ಪವಮಾನನು ||೨||
ಚಿತ್ತದಲ್ಲಿ ಆನಂದ ಸುಖವ ನೀವಳು ರಮಾ
ಮುಕುತಿ ಪ್ರದಾಯಕ ಶ್ರೀ ಪುರಂದರ ವಿಠಲನು
ಸತತ ಇವರಲ್ಲಿ ನಿಂತು ಈ ಕೃತಿಯ ನಡೆಸುವನು ||೩||
0 ಕಾಮೆಂಟ್‌ಗಳು