ಶ್ರೀ ತುಳಸಿ ಜಯ ತುಳಸಿ ನಿನಗೆ ವಂದನೆ - Shri Tulasi Jaya Tulasi Ninage Vandane

|| ತುಳಸಿ ಹಾಡು||



ಶ್ರೀ ತುಳಸಿ ಜಯ ತುಳಸಿ ನಿನಗೆ ವಂದನೆ

ಜಲಜನಾಭನ ಅರಸಿ ನಿನಗೆ ವಂದನೆ ||ಪ||


ನಿರ್ಮಲ ಮನದಲ್ಲಿ ನಿಶ್ಚಲ ಭಕ್ತಿಯಲಿ

ಮಾಧವನ ಪ್ರೀತಿಯನು ಗಳಿಸಿದೆ ಅಂದು |

ಶ್ರೀ ಕೃಷ್ಣ ತುಳಸಿ ಎಂಬ ನಾಮಗಳಿಸಿ

ಹರಿಯೊಳಗೆ ಒಂದಾಗಿ ಸಾಯುಜ್ಯ ಪಡೆದು||೧||


ಪ್ರತಿ ಮನೆಯ ಅಂಗಳವು ಆಲಯ ನಿನಗೆ

ಪ್ರತಿ ಮನೆಯ ಸುಮಂಗಲಿಯು ಭಕ್ತರು ನಿನಗೆ |

ಅರಿಶಿನ ಕುಂಕುಮದ ಸೌಭಾಗ್ಯ ತಾರೆ

ಆರೋಗ್ಯದ ಕಲ್ಪತರು ನೀನಾಗು ಬಾರೆ||೨||


ಉತ್ಥಾನ ದ್ವಾದಶಿಯ ಪುಣ್ಯದ ದಿನದೇ

ಚಂದನ ಧೂಪಾದಿಗಳ ನೀಡುವೆ ನಿನಗೆ |

ನೀನಗುವ ಮನೆಯೊಳಗೇ ಹಾಲಿನ ಹೊಳೆಯು

ನೀನೊಲಿಯೇ ಮನ ನಲಿಯೇ ಸುಖದ ಮಳೆಯೇ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು