ಕರುಣಿಸೆನ್ನ ಹರಿಯ ರಮಣಿ - Karunisenna Hariya Ramani

|| ದೇವಿ ಸ್ತುತಿ ||

ರಾಗ : ಕಮಾಚ್ 

ತಾಳ : ರೂಪಕ


ಕರುಣಿಸೆನ್ನ ಹರಿಯ ರಮಣಿ

ವರದ ಲಕುಮಿದೇವಿಯ

ಕಮಲ ಭಾಣ ಜನನಿ ದಿವ್ಯ-

ಕಮಲ ಪಾಣಿ ರಾಜಿತೇ ||


ಸಕಲ ನಿಗಮ ವಿನುತ ಚರಣೆ

ಸಕಲ ಭಾಗ್ಯದಾಯಿನಿ

ಸಕಲ ಮೌನಿ ನಿಕರ ವಂದ್ಯ

ಸಕಲ ಲೋಕ ನಾಯಕಿ ||


ಶರಧಿ ತನುಜೇ ಮಂಗಳಾಂಗಿ

ಪರಮ ಸೌಖ್ಯದಾಯಿನಿ

ವರದ ವೆಂಕಟಾದ್ರಿ ವರನ

ಪುರನಿವಾಸ ಮೋಹಿನಿ ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು