ಮುದ್ದು ಮುಖದಾತ ನಮ್ಮ - Muddu Mukhadata Namma

|| ಹನುಮ ಸ್ತುತಿ ||




ಮುದ್ದು ಮುಖದಾತ ನಮ್ಮ

ಮುಖ್ಯಪ್ರಾಣನಾಥನೊ

ಸದ್ಗಣವಂದಿತ ವಾಯುಜಾತ ರಾಮ ದೂತನೊ||ಪ||


ಜಾನಕೀಶನ ವೈರಿಶೂಲನೊ ಬಹು ಧೀರನೊ

ಮಾನಿನಿ ಸೀತೆಯ ಕಂಡು ಬಂದನೋ

ಮುಂದೆ ನಿಂದನೋ ||೧||


ವಾನರ ರೂಪಿಲಿ ಮುದ್ರೆಯಿತ್ತನೆ ವನ ಕಿತ್ತನೆ

ಆ ನಗರವನ್ನೆಲ್ಲ ಸುಟ್ಟನೊ ಬಹು ದಿಟ್ಟನೋ ||೨||


ಸಾಗರವನು ದಾಟಿದ ಧೀರ ಕಂಠೀರವನೊ

ರಾಗ ತಾಳ ಮೇಳದಲ್ಲಿ ಜಾಣನೊ ಪ್ರವೀಣನೋ||೩||


ನಂಬಿದ ಭಕ್ತರ ಕಾಯ್ವ ದಾತನೊ ಪ್ರಖ್ಯಾತನೊ 

ಅಂಬುಜಾಸನ ಪದಕೆ ಬಂದು

ನಿಂತನೋ ಹನುಮಂತನೋ ||೪||


ಹಯವದನ ಭಕ್ತ ಚೆಲ್ವ ತೇಜನೊ ಯತಿರಾಜನೊ

ದಾನವ ಕುಲಕೆ ಬಹು ಭೀಮನೊ

ಸಾರ್ವಭೌಮನೊ ||೫||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು