ಯದುಪತಿಯ ತೋರಮ್ಮಾ - Yadu Pathiya Thoramma

|| ಲಕ್ಷ್ಮಿ ಹಾಡು ||




ಯದುಪತಿಯ ತೋರಮ್ಮಾ ಯೆನ್ನ ನೀ ಬಿಡದಿರಮ್ಮ |

ಯದೆಯೊಳು ನಿನ್ನ ನಿಲಿಸಿಕೊಂಡನಾ ಖಳಕುಲ

ಖಂಡನಾ ನಿನ್ನಯ ಗಂಡನಾ ||ಪ|



ಸರಸೀಜ ದಳನೇತ್ರೇ ಸದಮಲ ಶುಭಗಾತ್ರೇ |

ಸರಸಾದಿ ನಿನ್ನ ಕೂಡ ಮಾತನಾಡುವ

ಭಕ್ತರೊಡನಾಡುವ ಕರುಣಾದಿ ನೋಡುವ ||೧||



ಮದಗಜ ಸಮಯಾತ್ರೆ ಮೇದಿನಿಯೊಳತಿಚಿತ್ರೆ |

ಅದುಭೂತ ಪ್ರಳಯಾಬ್ಧಿಯೊಳಿಪ್ಪನ

 ನಿನಗೊಲಿದಿಪ್ಪನ ಮನುಮಥನಪ್ಪನ ||೨||



ಆದ್ಯಂತಾ ಮಧ್ಯ ರಹಿತೆ

ಅಜಭವ ಸುರ ಮುದ್ದು ಮಾತೆ |

ಮುದ್ದು ಹಯವದನನಾ ಶ್ರೀಧರೇಶನಾ

ಸ್ವಾದಿಪುರವಾಸನ  ವಾದಿರಾಜಾಧೀಶನಾ ||3||

  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು