|| ಲಕ್ಷ್ಮಿ ಹಾಡು ||
ಯದುಪತಿಯ ತೋರಮ್ಮಾ ಯೆನ್ನ ನೀ ಬಿಡದಿರಮ್ಮ |
ಯದೆಯೊಳು ನಿನ್ನ ನಿಲಿಸಿಕೊಂಡನಾ ಖಳಕುಲ
ಖಂಡನಾ ನಿನ್ನಯ ಗಂಡನಾ ||ಪ|
ಸರಸೀಜ ದಳನೇತ್ರೇ ಸದಮಲ ಶುಭಗಾತ್ರೇ |
ಸರಸಾದಿ ನಿನ್ನ ಕೂಡ ಮಾತನಾಡುವ
ಭಕ್ತರೊಡನಾಡುವ ಕರುಣಾದಿ ನೋಡುವ ||೧||
ಮದಗಜ ಸಮಯಾತ್ರೆ ಮೇದಿನಿಯೊಳತಿಚಿತ್ರೆ |
ಅದುಭೂತ ಪ್ರಳಯಾಬ್ಧಿಯೊಳಿಪ್ಪನ
ನಿನಗೊಲಿದಿಪ್ಪನ ಮನುಮಥನಪ್ಪನ ||೨||
ಆದ್ಯಂತಾ ಮಧ್ಯ ರಹಿತೆ
ಅಜಭವ ಸುರ ಮುದ್ದು ಮಾತೆ |
ಮುದ್ದು ಹಯವದನನಾ ಶ್ರೀಧರೇಶನಾ
ಸ್ವಾದಿಪುರವಾಸನ ವಾದಿರಾಜಾಧೀಶನಾ ||3||
0 ಕಾಮೆಂಟ್ಗಳು