ಗುರುಪಾದದಿ ಬೆರೆದೂ ನೀನಿರೆ - Guru Padadi Beredu Neenire

 || ಗುರುಸ್ತುತಿ ||





ಗುರುಪಾದದಿ ಬೆರೆದೂ | ನೀನಿರೆ |

ಮರಣದ ಭಯವಿರದೂ |

ಪರಿಪರಿ ವಿಷಯವನರಸುತ ತಿರುಗುವ |

ಮರುಳಾಟವನಳಿದೂ ||


ಸಿರಿಬರಗಳು ಪೋಗಿ | ಗುರುವಿನ |

ಕರುಣವೇ ಹಿತವಾಗಿ |

ಕರಣದೊಳಿರುವಾವರಣಕೆ ಸಿಲುಕದೆ |

ಒಳಹೊರಗೊಂದಾಗಿ ||


ಭ್ರಾಂತಿಯ ಜಗವಳಿದೂ |

ಈ ಮಲಯಂತ್ರವ ಕಳೆದುಳಿದು |

ಕಾಂತಾ ಕನಕದ ಚಿಂತೆಯ

ಕಳೆದುಪಶಾಂತಿಯ ಗುಣ ಬಲಿದೂ ||


ಕುರುಡರ ನಡೆ ಬಿಟ್ಟು | ದೃಷ್ಟಿಯ |

ಪರಮಾರ್ಥದೊಳಿಟ್ಟು |

ಕರಣವ ಬೆಳಗಿಪ | ಗುರು ಶಂಕರನಿಗೆ |

ಪೆರೆತೆಂಬುದ ಸುಟ್ಟು ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು