|| ಶಿವ ಮಾಧವಸ್ತುತಿ ||
ಈತ ಲಿಂಗ ದೇವ ಶಿವನು
ಆತ ರಂಗ ಧಾಮ ವಿಷ್ಣು
ಮಾತನಾಡೋ ಮಂಕು ಮನುಜ
ಮನದಹಂಕಾರ ಬಿಟ್ಟು ||ಪ||
ವೇದಕೆ ಸಿಲುಕದಾತ ನೀತ
ವೇದ ನಾಲ್ಕು ತಂದನಾತ
ಬೂದಿ ಮೈಯೊಳು ಧರಿಸಿದ ನೀತ
ಇದ್ದ ಗಿರಿಯ ಪೊದ್ದನಾತ ||೧||
ವ್ಯಾಧನಾಗಿ ಒಲಿದನೀತ
ಮಾಧವ ಮಧುಸುಧನನಾತ
ಮದನನನ್ನ ಉರುಹಿದನೀತ
ಮದನ ಪುತ್ರನ ಪಡೆದಾತನಾತ ||೨||
ಗಂಗೆಯ ಪೊತ್ತಾತನೀತ
ಹಾಂಗೆ ಗರುಡ ಗಮನನಾತ
ತುಂಗ ಹೆಳವನ ಕಟ್ಟೆ
ಲಿಂಗನೀತ ರಂಗನಾಥ ||೩||
0 ಕಾಮೆಂಟ್‌ಗಳು