ಈತ ಲಿಂಗ ದೇವ ಶಿವನು - Eetha Linga Deva Shivanu

|| ಶಿವ ಮಾಧವಸ್ತುತಿ ||





ಈತ ಲಿಂಗ ದೇವ ಶಿವನು

ಆತ ರಂಗ ಧಾಮ ವಿಷ್ಣು

ಮಾತನಾಡೋ ಮಂಕು ಮನುಜ

ಮನದಹಂಕಾರ ಬಿಟ್ಟು ||ಪ||  


ವೇದಕೆ ಸಿಲುಕದಾತ ನೀತ

ವೇದ ನಾಲ್ಕು ತಂದನಾತ

ಬೂದಿ ಮೈಯೊಳು ಧರಿಸಿದ ನೀತ

ಇದ್ದ ಗಿರಿಯ ಪೊದ್ದನಾತ ||೧||


ವ್ಯಾಧನಾಗಿ ಒಲಿದನೀತ

ಮಾಧವ ಮಧುಸುಧನನಾತ

ಮದನನನ್ನ ಉರುಹಿದನೀತ

ಮದನ ಪುತ್ರನ ಪಡೆದಾತನಾತ ||೨||


ಗಂಗೆಯ ಪೊತ್ತಾತನೀತ

ಹಾಂಗೆ ಗರುಡ ಗಮನನಾತ

ತುಂಗ ಹೆಳವನ ಕಟ್ಟೆ

ಲಿಂಗನೀತ ರಂಗನಾಥ  ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು