|| ನಾರಾಯಣ ಸ್ತುತಿ ||
ನಾರಾಯಣನೆಂಬ ನಾಮದ ಬೀಜವ
ನಾಲಿಗೆ ತುದಿಯಿಂದಲಿ ಬಿತ್ತಿರಯ್ಯ
ಹೃದಯ ಹೊಲವ ಮಾಡಿ ಮನವ ನೇಗಿಲ ಮಾಡಿ
ಶ್ವಾಸೋಶ್ವಾಸವ ಎರಡೆತ್ತು ಮಾಡಿ
ಜ್ಞಾನವೆಂಬ ಹಗ್ಗ ಕಣ್ಣಿಯ ಮಾಡಿ
ನಿರ್ಮಾಮವೆಂಬ ಗುಂಟೆಲಿ ಹರವಿರಯ್ಯಾ
ಮದಮತ್ಸರಗಳೆಂಬ ಮರಗಳನೇ ತರಿದು
ಕಾಮಕ್ರೋಧಗಳೆಂಬ ಕಳೆಯ ಕಿತ್ತು
ಪಂಚೇದ್ರಿಯವೆಂಬ ಮಂಚಿಕೆಯನೆ ಹಾಕಿ
ಚಂಚಲವೆಂಬ ಹಕ್ಕಿಯ ಹೊಡೆಯಿರಯ್ಯ
ಉದಯಾಸ್ತಮಾನವೆಂಬ ಎರಡು ಕೊಳಗದಲ್ಲಿ
ಆಯುಷ್ಯವೆಂಬ ರಾಶಿ ಅಳೆಯುತಿರೆ
ಸ್ವಾಮಿ ಶ್ರೀ ಪುರಂದರ ವಿಠಲನ ನೆನೆದರೆ
ಪಾಪರಾಶಿಯ ಪರಿಹರಿಸುವನಯ್ಯ||
0 ಕಾಮೆಂಟ್ಗಳು