ಭಜಗೋವಿಂದಂ ಕೃಷ್ಣ ಭಜಗೋವಿಂದಂ - Bhaja Govindam Krishna Bhaja Govindam

|| ಗೋವಿಂದ ಸ್ತುತಿ ||





ಭಜಗೋವಿಂದಂ ಕೃಷ್ಣ ಭಜಗೋವಿಂದಂ

ಗೋವಿಂದ ಪಾದ ಭಜನಂ ನಿತ್ಯಾನಂದಂ

||ಭಜಗೋವಿಂದಂ||


ಅಂದದ ಶ್ರೀನಿಧಿ ಶ್ರೀಕರ ಶ್ರೀಹರಿ||2||

ಭಕ್ತ ಜನಪ್ರಿಯ ನಮ್ಮ ಶ್ರೀಹರಿ||2||

ಭಾಗವತಪ್ರಿಯ ನಮ್ಮ ಶ್ರೀಹರಿ||2||


ಆನಂದರೂಪ ಶ್ರೀಹರಿ

ಕಲ್ಯಾಣರೂಪ ಶ್ರೀಹರಿ

ಶರಣಾಗಿ ಬಂದು ಅವನ

ಶರಣೆಂದು ಬೇಡೆ ಒಲಿವ

ಪರಾತತ್ವಸಾರ ಅವನೆ

 ||ಭಜಗೋವಿಂದಂ||


ಭಜಗೋವಿಂದಂ ಕೃಷ್ಣ ಭಜಗೋವಿಂದಂ

ಗೋವಿಂದ ಪಾದ ಭಜನಂ ನಿತ್ಯಾನಂದಂ

||ಭಜಗೋವಿಂದಂ||


ಗೋವಿಂದ ಹರಿಜಯಶೌರಿ

ಭವಭಯನಾಶನಾ ಶೌರಿ||ಗೋವಿಂದ||

ಶರಣಾಗಿ ಬಂದು ಅವನ

ಶರಣೆಂದು ಬೇಡೆ ಒಲಿವ

ಪರಾತತ್ವಸಾರ ಅವನೆ

 ||ಭಜಗೋವಿಂದಂ||


ಭಜಗೋವಿಂದಂ ಕೃಷ್ಣ ಭಜಗೋವಿಂದಂ

ಗೋವಿಂದ ಪಾದ ಭಜನಂ ನಿತ್ಯಾನಂದಂ

 ||ಭಜಗೋವಿಂದಂ||


ರಾಧ ಮಾಧವನಾದ ಶೌರಿ||2||

ವರದ ಶ್ರೀಕೃಷ್ಣ ಮುರಾರಿ||2|| ||ರಾಧ||

ಶರಣಾಗಿ ಬಂದು ಅವನ

ಶರಣೆಂದು ಬೇಡೆ ಒಲಿವ

ಪರಾತತ್ವಸಾರ ಅವನೆ

||ಭಜಗೋವಿಂದಂ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು