ಹರಿದಾಸರ ಸಂಘಕೆ ಸರಿಯುಂಟೆ - Haridasara Sanghake Sariyunte

|| ಹರಿ ಸ್ತುತಿ  ||





ಹರಿದಾಸರ ಸಂಘಕೆ ಸರಿಯುಂಟೆ

ಗುರು ಕರುಣಕೆ ಇನ್ನು ಪಡಿಯುಂಟೆ ದೇವ

                            ||ಹರಿದಾಸರ||



ದಾವನಲಣ ತಪ್ಪಿಸಿ ಕಾಡಾನೆಯ

ದೇವಗಂಗೆಗೆ ತಂದು ಹೊಗಿಸಿದಂತೆ

                           ||ದಾವನಲಣ||

ಆವರಿಸಿರುವ ಷಡ್ವರ್ಗವ ತಪ್ಪಿಸಿ||2|

ಶ್ರೀವರನ ಕರುಣಾ ರಸದಿ ತೋಯಿಸುವ

                          ||ಹರಿದಾಸರ||



ಕಂದಿಬೇಸಗೆಯಲ್ಲಿ ನೊಂದ ಚಕೋರಕ್ಕೆ

ಇಂದುಬಿಂಬದಿ ತಂದು ಹೊಗಿಸಿದಂತೆ

                         ||ಕಂದಿಬೇಸಗೆಯಲ್ಲಿ||

ಕುಂದದೆ ಮಮತೆಯ ನೊಂದಿಸಿ ಎನ್ನ||2||

ಗೋವಿಂದನ ಪಾದ ಸನ್ನಿಧಿಯ ಸೇರಿಸುವ

                                ||ಹರಿದಾಸರ||



ತಡೆ ನೀರಿಗೆ ಹರಿಯುವ ತೊರೆಯಲ್ಲಿ 

ಪೋಪರ ಪಿಡಿದೆತ್ತಿ ದಡಕ್ಕೆ ಸೇರಿಸಿದಂತೆ       

                             ||ತಡೆ ನೀರಿಗೆ||

ಕಡೆಗೆಟ್ಟು ಸಂಶ್ರೀತಿಯೊಳಗೆ ಸಿಕ್ಕಿದೆನ್ನ||2||

ಬಿಡದೆ ಶ್ರೀಕ್ರಷ್ಣನಂಘ್ರಿಗಳ ಸೇರಿಸುವ

                           ||ಹರಿದಾಸರ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು