|| ತುಳಸಿ ಹಾಡು ||
ರಚನೆ : ಗುರುಗೋವಿಂದ ದಾಸರು
ತುಳಸಿ ದೇವಿ ಪಾದಕೆ ನಾರೇರು ಬೆಳಗಿರೆ ಆರತಿಯ
ಬೆಳಗುವುದೋ ನಮ್ಮ ಅಳಗಿರಿ ರಂಗನ
ಲಲನೆ ಶ್ರೀತುಳಸಿಗೆ ಕಲಿಮಲ ಹರಿಗೆ||ಪ||
ದಳಪ್ರತಿದಳದಲ್ಲಿ ಶ್ರೀಹರಿ ನೆಲೆಸಿಹ ತಾನಲ್ಲಿ
ಒಲಿಮೇಲಿ ಭಕುತರ ಹಲವು ಸೇವೆಗಳಿಗೆ||
ಒಲಿದು ಅಭೀಷ್ಠವ ಸಲಿಸುವ ದೇವಿಗೆ ||೧||
ಶರಧಿ ಮದಿಸೆ ಅಮೃತ ಕಲಶವನು
ಧರಿಸುತ ಧನ್ವಂತ್ರಿ ......||
ಬರಲು ನಯನದಿಂದುರುಳೆ ಆನಂದಕೆ
ವರ ಬಿಂಬೋಧೃವೇ ಹರಿಪ್ರಿಯೆ ತುಳಸಿ ||೨||
ಜಾಂಬವತಿಯು ದೇವಿ ನಿನ್ನಲಿ ಇಂಬು ತೋರಿ ಇರಲು
ಅಂಬುಜಾಕ್ಷಿ ಗುರು ಗೋವಿಂದ ವಿಠಲನ
ತುಂಬಿ ವೈಭವದಿ ಸಂಭ್ರಮ ಸೇವಿಪ ||೩||
0 ಕಾಮೆಂಟ್‌ಗಳು