ವಿಠ್ಠಲಾ ಎನ್ನಿರೊ ಸುಜನರೆಲ್ಲಾ - Vitthala Enniro Sujanarella

 || ವಿಠ್ಠಲ ಸ್ತುತಿ ||




ವಿಠ್ಠಲಾ ಎನ್ನಿರೊ ಸುಜನರೆಲ್ಲಾ ll 

ವಿಠ್ಠಲಾ ಎಂದಾರೆ ಸುಟ್ಟು ಹೋಗೋದು ಪಾಪ ll


ಪ್ರಾತಃ ಕಾಲದೊಳು ಸ್ನಾನಾದಿ 

ಕರ್ಮ ಮುಗಿಸೀ ವಿಠ್ಠಲಾ ಎನ್ನಿರೊ

ವಾತದೇವನ ದ್ವಾರ ಅರ್ಪಿಸುತ್ತಾ 

ನೀವು ವಿಠ್ಠಲಾ ಎನ್ನಿರೊ ll


ಗುರುಗಳಲ್ಲಿಗೆ ಪೊಗಿ ವಂದಿಸಿ 

ಮೆಲ್ಲಾನೆ ವಿಠ್ಠಲಾ  ಎನ್ನಿರೊ

ಮರುತಮತದ ಸಚ್ಛಾಸ್ತ್ರಗಳ 

ನೋಡುತಾ ವಿಠ್ಠಲಾ ಎನ್ನಿರೊ ll 2 ll


ಪಂಚಭೇದ ಪ್ರಾಪಂಚ ಸರ್ವವು 

ತಿಳಿದು ವಿಠ್ಠಲಾ ಎನ್ನಿರೊ

ಪಂಚಬಾಣನಯ್ಯ ಪಂಚರೂಪದಿ 

ತೋರುವಾ ವಿಠ್ಠಲಾ ಎನ್ನಿರೊ ll 3 ll


ಶ್ರೀಪ್ರಾರಂಭಮಾಡಿ ಪರಮೇಷ್ಠಿ 

ಪರಿಯಂತ ವಿಠ್ಠಲಾ ಎನ್ನಿರೊ

ಶ್ರೀಪ್ರಣವ ಪ್ರತಿಪಾದ್ಯಗಿವರು 

ಪ್ರತಿಬಿಂಬರೆಂದು ವಿಠ್ಠಲಾ ಎನ್ನಿರೊ ll 4 ll


ಮಾತುಮಾತುಗಳೆಲ್ಲಾ ಶ್ರೀಹರಿಸ್ತೋತ್ರವೆಂದು 

ವಿಠ್ಠಲಾ ಎನ್ನಿರೊ

ಆತುಮಾಂತಾರಾತ್ಮನೆಂದು ಕೂಗುತ 

ಒಮ್ಮೆ ವಿಠ್ಠಲಾ ಎನ್ನಿರೊ ll 5 ll


ತೀರ್ಥಕ್ಷೇತ್ರಗಳಿಗೆ ಪೊಗಿ 

ಬರುವಾಗ ವಿಠ್ಠಲಾ ಎನ್ನಿರೊ

ಪಾರ್ಥಸಖನ ಪ್ರೇರಣೆಯಿಂದ 

ಮಾಡಿದೆವೆಂದು ವಿಠ್ಠಲಾ ಎನ್ನಿರೊ ll 6 ll


ನಂಬೀದ ಜನರಿಗೆ ಬೆಂಬಲನಾಗುವ 

ವಿಟ್ಠಲಾ ಎನ್ನಿರೊ

ಸಂಭ್ರಮದಿಂದಾ ಸಂರಕ್ಷಿಸುವನೆ 

ಇವನೂ ವಿಠ್ಠಲಾ ಎನ್ನಿರೊ ll 7 ll


ಕಂಚಿಕಾಳಾಹಸ್ತಿ ಶ್ರೀರಂಗ 

ಮೊದಲಾಗಿರುವ ವಿಠ್ಠಲಾ ಎನ್ನಿರೊ

ವಂಚನೆಯಿಲ್ಲಾದೆ ಭಜಿಸಿದವರ 

ಪೊರೆವಾ ವಿಠ್ಠಲಾ ಎನ್ನಿರೊ ll 8 ll


ಪಂಚಪ್ರಾಣಾರಲಿನಿಂತು 

ಕಾರ್ಯಮಾಳ್ಪ ವಿಠ್ಠಲಾ ಎನ್ನಿರೊ

ಸಂಚಿತಾಗಾಮಿ ಕರ್ಮ ಇವನಿಂದ 

ನಾಶವೆಂದು ವಿಠ್ಠಲಾ ಎನ್ನಿರೊ ll 9 ll


ಊರ್ಧ್ವಪುಂಡ್ರಗಳು ದ್ವಾದಶನಾಮ 

ಇಡುವಾಗ ವಿಠ್ಠಲಾ ಎನ್ನಿರೋ 

ಶುದ್ಧನಾಗೀ ಶುಭ್ರಹೊಸ ವಸ್ತ್ರ 

ಹೊದೆವಾಗ ವಿಠ್ಠಲಾ ಎನ್ನಿರೊ ll 10 ll


ಪಂಚಮುದ್ರೆಯಲಿ ಪಂಚರೂಪದಿ 

ಇರುವ ವಿಠ್ಠಲಾ ಎನ್ನಿರೊ

ನಿರ್ವಂಚನಾಗಿ ಧರಿಸಿದವರಿಗೊಲಿವಾ 

ವಿಠ್ಠಲಾ ಎನ್ನಿರೋ  ll 11 ll


ವಾದ್ಯತುಂಬಿಸಿ ಶಿರಸಿನ 

ಪರಿಯಂತ ವಿಠ್ಠಲಾ ಎನ್ನಿರೊ

ವೇದೈಕವೇದ್ಯ ವಿಶ್ವಾಮೂರ್ತಿ 

ಕಾರ್ಯಗಳೆಂದು ವಿಠ್ಠಲಾ ಎನ್ನಿರೊ ll 12 ll


ಚೇತನಾ ಚೇತನ ಜಡದೊಳಗೆ 

ನೀವು ವಿಠ್ಠಲಾ ಎನ್ನಿರೊ

ಪ್ರೀತಿಯಿಂದಾಲಿ ಪೂಜೆಮಾಡಿದವರಾಗೆ 

ಒಲಿವ ವಿಠ್ಠಲಾ ಎನ್ನಿರೊ ll 13 ll


ಈ ರೀತಿಯಲಿ ಅನಂತಾನಂತ 

ಪರಿ ಚಿಂತಿಸಿ ವಿಠ್ಠಲಾ ಎನ್ನಿರೊ

ಶಾರೀರದೊಳಿರುವ ಪ್ರಾಜ್ಞನಲಿ 

ಕೂಡಿಸಿ ವಿಠ್ಠಲಾ ಎನ್ನಿರೊ ll 14 ll


ಮಧ್ವಾಂತರ್ಯಾಮಿಯಾಗಿ ಉಡುಪಿಯಲ್ಲಿ 

ನಿಂತ ವಿಠ್ಠಲಾ ಎನ್ನಿರೊ

ಮುದ್ದುಮೋಹನ್ನ ವಿಟ್ಠಲನೆ 

ಜಗಕೆ ಕರ್ತು ವಿಠ್ಠಲಾ ಎನ್ನಿರೋ ll 15 ll


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು