|| ಗೋವಿಂದ ಸ್ತುತಿ ||
ವೇಣು ಊದೆಲೋ ಕೃಷ್ಣ
ಪ್ರೀತಿ ರಾಗದಲ್ಲಿ ||ವೇಣು||
ಪ್ರೀತಿ ರಾಗದಲ್ಲಿ
ವೇಣುಗಾನದಲ್ಲಿ ನೀನು ವಿಶ್ವವನ್ನೆ
ಮರುಳು ಮಾಡಿ ||
ಒಲವಿನ ಸ್ವರ ಮಳೆಯನು ಚೆಲ್ಲಿ ||2||
ಬದುಕ ಒಂದು ಹಾಡು ಮಾಡಿ ||ವೇಣು||
ರಾಧೆಗಂದು ಪ್ರೀತಿ ತಂದೆ
ಮೀರ ಭಕ್ತಿಗೊಲಿದು ನಿಂದೆ |
ನೀ ದಾಸಳಿಗೆ ಅನುಗ್ರಹ ತಂದು ||2||
ಇರುಳಿನಲ್ಲಿ ಬೆಳಕನು ನೀಡಿ ||ವೇಣು||
ಮಧ್ವಮುನಿಗೆ ಪ್ರೀತಿ ತಂದೆ
ಕನಕದಾಸಗೊಲುಮೆ ತಂದೆ ||
ಪುರಂದರರ ಹಾಡಿಗೆ ಅಂದು ||2||
ನಲಿದು ಕುಣಿದು ಮೋದಗೊಂಡೆ ||ವೇಣು||
ಉಡುಪಿ ಕ್ಷೇತ್ರದಲ್ಲಿ ಬಂದು
ಭರದ ಮಳೆಯ ನೀನು ತಂದು ||
ಅಷ್ಠಮಠದ ಯತಿಗಳಿಗೊಲಿದು ||2||
ಭಕ್ತಿಗಾನ ಲಯಕೆ ಒಲಿದು ||ವೇಣು||
0 ಕಾಮೆಂಟ್‌ಗಳು