|| ಲಕ್ಷ್ಮಿ ಸ್ತುತಿ ||
ಜಯತು ಕೃಷ್ಣನ ಪಟ್ಟದ ರಾಣಿಗೆ
ಜಯತು ಲಕ್ಷ್ಮಿ ದೇವಿಗೆ|
ಜಯತು ಭಕ್ತರ ಸಲಹುವ ತಾಯಿ
ಜಯತು ರುಕ್ಮಿಣಿ ದೇವಿಗೆ||
ಪೀತಾಂಬರದ ಸೀರೆಯನುಟ್ಟು|
ಕಾಶಿ ಕುಪ್ಪಸ ತೊಟ್ಟಿಹಳ|
ಜಾತಿ ಮುತ್ತಿನ ಮೂಗುತಿಯಿಟ್ಟು
ವಾಲಿ ಬಾವಲಿನಿಟ್ಟಿಹಳ||
ಕಾಲಕಡಗ ಕೀಲಗೆಜ್ಜೆ ಕಾಲಲಂದುಗೆ ವಿಟ್ಟಿಹಳ|
ಲೋಲಮುದ್ರಿಕೆ ಕಿರುಪಿಲ್ಲಂಗಳೇ
ಕಾಲುಂಗುರ ತಾ ನಿಟ್ಟಿಹಳ||
ಮಿಂಚಿನ ಬುಗುಡಿ ಗೊಂಚಲ ಮುತ್ತು,
ಕಂಠಾಭರಣ ನಿಟ್ಟಿಹಳ|
ಕಂಠಿ ಸರಪಳಿ ಕೊರಳೊಳು ಹಾಕಿ
ವಂಕಿ ತೋಳು ತಿರುಹುವವಳ||
ವಾರದರುಬ್ಬು ಗೀರು ಗಂಧ ದಾರಾ ಬಳೆಯನಿಟ್ಟಿಹಳೆ|
ನಾರದ ಮುನಿ ತಂದ ಪಾರಿಜಾತದ ಪುಷ್ಪ
ವಾರದುರುಬಿಗೆ ತಾ ಮುಡಿದಿಹಳೆ||
ಪೊಡವಿಗೊಡೆಯಳೇ ಪಾವನ ಮೂರುತಿ
ಜಗದೊಡೆಯ ಕೃಷ್ಣನ ಪ್ರಿಯಳೇ|
ಸಡಗರದಿಂದ ತನ್ನ ಕಡಗದ ಕೈಯಿಂದ
ಪಿಡಿದು ಭಾಗ್ಯ ತಾ ಕೊಡುತಿಹಳೆ||
ಹೊನ್ನ ವೃಂದಾವನದೊಳಗೆ ಚೆನ್ನಾಗಿ ತಾ ನಿಂತಿಹಳೆ|
ಚಿನ್ಮಯ ಮೂರುತಿ ಪ್ರಸನ್ವೆಂಕಟೇಶನ
ಕೊರಳಿಗೆ ಮಾಲೆಯ ಹಾಕಿಹಳೆ||

0 ಕಾಮೆಂಟ್ಗಳು