ಅಕ್ಕ ಕೊಳಲನೂದುವ ಸುಂದರನ್ಯಾರೇ ಅಕ್ಕ - Akka Kolalanooduva sundaranaare Akka

|| ಶ್ರೀ ಕೃಷ್ಣ ಭಜನೆ ||




ಅಕ್ಕ ಕೊಳಲನೂದುವ ಸುಂದರನ್ಯಾರೇ ಅಕ್ಕ |

ಸುಂದರನ್ಯಾರೇ ನೋಡಲು ಬಾರೆ ||


ಅಮ್ಮಮ್ಮ ಮಾರನಸ್ತ್ರವ ತಾಳಲಾರೆವೆ ಅಕ್ಕ|

ಬೊಮ್ಮನ ಪಿತನಂತಃಕರಣಿರಲೇ ಅಕ್ಕ ||1|| 


ಪತಿಯು ನಮ್ಮನು ಬಿಟ್ಟರೆ ಬಿಡಲೇ ಅಕ್ಕ

 ರತಿಪತಿ ಪಿತನ ದಯವು ಇರಲೇ ಅಕ್ಕ ||2|| 


ಮನೆ ಧನವೆತ್ತ ಪೋದರೆ ಪೋಗಲೇ ಅಕ್ಕ

ಮನಸಿಜ ಪಿತನ ದಯವು ಇರಲೇ ಅಕ್ಕ ||3|| 


ಕಂದರ ಎತ್ತಲಾರೆವು ನಾವು ಕೇಳೆ ಅಕ್ಕ

ಕಂದರ್ಪ ಸುತನ ಕರೆದು ತಾರೇ ಅಕ್ಕ ||4|| 


ನೀರೆ ಪೋಗೋಣು ನಡಿ ಆ ವನಕೆ ಅಕ್ಕ 

ಮಾರಸುಂದರನ ನೋಡುವುದಕ್ಕೆ

ಇಂದಿರೇಶನ್ನ ಕರೆತರುವುದಕ್ಕೆ ಅಕ್ಕ ||೫||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು