ಅಂಗಜ ಪಿತನರ್ಧಾಂಗಿ ನೀ ಏಳು - Angaja Pithanardhangi Nee Elu

|| ಲಕ್ಷ್ಮಿ ಹಾಡು||



ಓಂ ಹಿರಣ್ಯಾವರ್ಣಾಂ ಹರಿಣೀಂ

ಸುವರ್ಣರಜತಸ್ರಜಾಮ್||


ಅಂಗಜ ಪಿತನರ್ಧಾಂಗಿ ನೀ ಏಳು

ಶೃಂಗಾರದಂಥ ಶುಭಾಂಗಿ ನೀ ಏಳು

ಕಂಗಳ ನೋಟದ ಕಡು ಚೆಲ್ವೆ ನಿನ್ನ

ಪಾದಂಗಳಿಗೆರಗುವೆ ಎನುತ ಮಾಲಕ್ಷುಮಿಯ

ಅಂಗನೆಯರ್ಹಸೆಗೆ ಕರೆದರು|| 


ಅಜನ ಜನಕನರಗಿಳಿಯೆ ನೀ ಏಳು

ಪದಮನಾಭನ ಪಟ್ಟದರಸಿ ನೀ ಏಳು

ತ್ರಿಜಗ ಭೂಷಿತನೆದೆ ಮ್ಯಾಲೆ ಹೊಂದಿರುವಂಥ

ಮದಗಜ ಗಮನೆ ಮಾಲಕ್ಷ್ಮಿ ಬಾರೆನುತಲಿ

ಮುದದಿಂದಲಿ ಹಸೆಗೆ ಕರೆದರು ||


ಸೋಮ ವದನೆ ಸುಗುಣೆ ಜಾಣೆ ನೀ ಏಳು

ಕೋಮಲ ಕೋಕಿಲವಾಣಿ ನೀ ಏಳು

ಹೇಮ ಮಾಣಿಕ್ಯ ನಾಗವೇಣಿಯೆ ನಮ್ಮ

ಭೀಮೇಶ ಕೃಷ್ಣನ ನಿಜರಾಣಿ ಮಾ ಲಕ್ಷುಮಿ

ಪಟ್ಟದರಾಣಿ ಬಾ ಹಸೆಗೆ ಕರೆದರು ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು