ದೇವಾ ದೇವಾ ದೀನಬಂಧು - Deva Deva Deena Bandhu

|| ಗುರು ಸ್ತುತಿ ||




ದೇವಾ ದೇವಾ ದೀನಬಂಧು

ಪಾರ ಮಹಿಮ ದಯಾ ಸಿಂದು

ಭವದ ಬವಣೆ ನೀಗಲೆಂದು

ಯೋಗಿ ರೂಪ ತಳೆದೆ ಇಂದು


ಲೋಕ ಹಿತಕೆ ಧರ್ಮ ಮರ್ಮ

ಅರುಹಿ ಬೆಳೆಸಿ ಲೋಕ ಪ್ರೇಮ

ಕರ್ಮಪಾಲಾ ದಯಾಶೀಲ

ಶೋಭೆ ತುಳಸಿ ಮಾಲಾ


ಶಾಂತಿದೂತ ಪೂರ್ಣಚಂದ್ರ

ಜ್ಞಾನದಾತ ಪರಮಮಿತ್ರ

ಯೋಗಿವರ್ಯ ಭೋಗದೂರಿ

ಶುದ್ಧವಸನ ಧಾರಿ


ಗುರುಮಹಿಮ ಲೀಲೆ ಚೆಂದ

ಗುರು ಸ್ತುತಿಯೆ ಬ್ರಹ್ಮಾನಂದ

ಜ್ಞಾನಾಮೃತ ಪಾದತೀರ್ಥ

ಸದ್ಗುರು ಶ್ರೀನಾಥ




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು