|| ದೇವಿ ಸ್ತುತಿ ||
ಜಯ ಜಯ ಜಗಜ್ಜನನಿ ಭವಾನಿ
ಜಯಜಯ ಜಗಜ್ಜನನಿ ಭವಾನಿ
ನಮಿಸುವೆ ಶಿವ ರಮಣಿ ದೇವಿ
ಜಯ ಜಯ ಸುರವರ ಮುನಿವರದಾಯಿನಿ
ಜಯ ಮಹಿಷಾಸುರ ಮರ್ದಿನಿಯೇ||ಪ||
ಅಷ್ಟ ಶಕ್ತಿ ಸಹಚಾರಿಣಿ ಮಾತೆ|ಕಷ್ಟವ ನೀಗಿಸುತೆ
ಶಿಷ್ಟರ ರಕ್ಷಿಸಿ ದುಷ್ಟರ ಶೀಕ್ಷಿಸಿ
ಅಷ್ಟ ಸೌಭಾಗ್ಯವ ನೀಡುವ ದೇವತೆ||೧||
ತುಂಗಭದ್ರ ತಟ ವಾಸಿನಿಯೇ।ಭಂಗಕುಂತಳೆ ತಾಯೆ
ಮಂಗಳಕಾರಿಣೀ ಜಗದೋದ್ಧಾರಿಣಿ|ಭಗವತಿ ಭಯ
ಸಂಹಾರಿಣಿ ಮಾಯೆ||೨||
ನಿತ್ಯ ನಿರ್ಮಲ ನಿರಾಕಾರೆ|ನಿತ್ಯ ಶುದ್ಧ ನಿರಂತರೆ
ಮಿಥ್ಯ ವಿಮೋಚಿನಿ ಸತ್ಯ ಪರಾಯಿಣಿ|
ನಿತ್ಯದಿ ಭಜಿಪರ ಪೊರೆಯುವ ಧೀರೆ||೩||
0 ಕಾಮೆಂಟ್ಗಳು