|| ಹರಿ ಸ್ತುತಿ ||
ಉರಗಾದ್ರಿ ವಾಸ ವಿಠ್ಠಲ ನೀನಿವನ
ಪರಮಾದರದಿ ಕಾಪಾಡೋ ಹರಿಯೇ ।
ಗುರು ಕರುಣವನು ಪಡೆದು
ಹರಿ ವಾಯು ಗುರುಗಳ
ಸೇವೆಯನೆಯಿತ್ತು ಕಾಪಾಡೋ ಹರಿಯೇ ।।
ಗುರು ಕರುಣವೇ ಪಡೆಯದ ಸುರನರಾದ್ಯರಿಗೆ
ಹರಿ ಕರುಣ ದೊರೆಯದೆಂಬುದು ಸಿದ್ಧ
ನಿರುತ ದೃಢ ಮನವ ನೀನಿತ್ತು ಕಾಪಾಡೋ ಹರಿಯೇ||
ಹರಿ ನಿನ್ನ ದಾಸರಾದಾಸ್ಯವನುಇತ್ತು
ಸತತ ಕಾಪಾಡೋ ಹರಿಯೇ ।
ಪರಮ ಭಾಗವತರ ಸಂಗವನುಯಿತ್ತು
ಪರಮ ಕೃಪೆಯಿಂದ ರಕ್ಷಿಸೋ ಹರಿಯೇ ।।
ಪಂಚ ರೂಪಾತ್ಮಕನೆ ಪಂಚ ರೂಪವನರುಹಿ ।
ಸಂಚಿತಾಗಮಿಗಳ ಹರಿಸಿ ।
ಮಿಂಚಿನಂದದಿ ಪೊಳೆಯೋ ಹರಿಯೇ ।
ಗುರು ಶಿಷ್ಯ ಬಿಂಬೈಕ್ಯಚಿಂತನೆಯಿಂದ ।
ಹರಿ ವಾಯು ಮತದಲ್ಲಿ ನಿರುತ ಕಾಪಾಡೋ ಹರಿಯೇ|
ಪರಮ ಭಾಗವತರನ್ನು ಹಿಂದೆ ರಕ್ಷಿಸಿದಂತೆ ನೀನಿವನ
ನಿರುತ ಕಾಪಾಡೋ ಹರಿಯೇ।ಪರಮ ಭಾಗವತರ ತಂದೆ
ಮುದ್ದುಮೋಹನ ವಿಠ್ಠಲ ಇನ್ನಿವನಲಿ
ಒಂದಂಶದಲ್ಲಿಇದ್ದು ಹೃದಯಾಂಬರದಿ ।
ನಿನ್ನ ಬಿಂಬ ರೂಪವ ತೋರಿ ಕಾಪಾಡೋ ಹರಿಯೇ ।।
0 ಕಾಮೆಂಟ್‌ಗಳು