ಮಧುಪುರ ದೊಡೆಯ ಗಣನಾಥ - Madhupura Dodeya Gananatha

 ||ಮದವೂರ ಗಣಪತಿ ಭಜನೆ||

 ರಚನೆ : ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ.



ಮಧುಪುರ ದೊಡೆಯ ಗಣನಾಥ

ಮದರಿಗೆ ಒಲಿದ ಗಿರಿಜೆಸುತ

ಮುದದಲಿ ಭಜಿಸುವೆ ಗಜವದನ

ಚದುರಿಸು ದುರಿತವ ಗಜಾನನ ll 


ಕೇಳುವೆ ವರವನು ಗಣಪತಿಯೆ

ಹೇಳುವೆ ಭಜನೆಯ ನೀನೊಲಿಯೆ 

ಬೀಳೆನು ಈ ಭವ ಬಂಧನದಿ 

ಬಾಳಿಸು ಚಂದದಿ ಈ ಜಗದಿ ll 


ಪಾಡುವೆ ನಿನ್ನಯ ನಾಮ ಸಂಕೀರ್ತನೆ

ಬೇಡುವೆ ಗಣಪನೆ ಸಾನಿಧ್ಯ

ಕಾಡಿದೆ ನಿನ್ನನು ಕಾಣುವ ತವಕವು 

ಮಾಡಿದೆ ಗಣಪತಿ ಪೂಜೆ ಹವನವು ll 


ಲಾಲಿಸು ಶಿವಸುತ ಗಣಗಳ ಒಡೆಯನೇ 

ಪಾಲಿಸು ಎಮ್ಮನು ಕರುಣದಿ ಪೊರೆಯೋ 

ಆಲಿಸು ಎನ್ನಯ ಮೊರೆಯನು ಪ್ರೇಮದಿ

ತೇಲಿಸು ಭಕ್ತಿಯ ಸಾಗರದಿ ll 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು