|| ಮಾರುತಿ ಭಜನೆ ||
ರಚನೆ : ಪುರಂದರ ದಾಸರು
ಸಾರಿ ಬಂದನೆ ಪ್ರಾಣೇಶ ಬಂದನೆ |
ಸಾರಿ ಬಂದು ಲಂಕಾಪುರವ
ಮೀರಿದ ರಾವಣನ ಕಂಡು |
ಧೀರನು ವೈಯಾರದಿಂದ ||ಸಾರಿ ಬಂದನೆ||
ವಾಯುಪುತ್ರನೆ ಶ್ರೀರಾಮನ ದೂತನೆ |
ಪ್ರೀತಿಯಿಂದ ಸೀತಾಂಗನೆಗೆ
ಮುದ್ರಿಕೆಯ ತಂದಿತ್ತವನೆ ||ಸಾರಿ ಬಂದನೆ||
ಭೀಮಸೇನನೆ ಕುಂತಿತನಯನೆ |
ವಿರಾಟನ ಮನೆಯೊಲು ನಿಂತು
ತಾ ಕೀಚಕನ ಸಂಹರಿಸಿದವನೆ ||ಸಾರಿ ಬಂದನೆ||
ಮಧ್ವರಾಯನೆ ,ಸರ್ವಜ್ಞ ಶ್ರೇಷ್ಠನೆ |
ಅದ್ವ್ಯೆತವ ಗೆದ್ದು ಪುರಂದರವಿಠ್ಠಲನ
ಮುಂದೆ ನಿಂದವನೆ||ಸಾರಿ ಬಂದನೆ||
0 ಕಾಮೆಂಟ್ಗಳು