|| ತುಳಸಿ ಹಾಡು||
ಶ್ರೀ ತುಳಸಿ ಜಯ ತುಳಸಿ ನಿನಗೆ ವಂದನೆ
ಜಲಜನಾಭನ ಅರಸಿ ನಿನಗೆ ವಂದನೆ ||ಪ||
ನಿರ್ಮಲ ಮನದಲ್ಲಿ ನಿಶ್ಚಲ ಭಕ್ತಿಯಲಿ
ಮಾಧವನ ಪ್ರೀತಿಯನು ಗಳಿಸಿದೆ ಅಂದು |
ಶ್ರೀ ಕೃಷ್ಣ ತುಳಸಿ ಎಂಬ ನಾಮಗಳಿಸಿ
ಹರಿಯೊಳಗೆ ಒಂದಾಗಿ ಸಾಯುಜ್ಯ ಪಡೆದು||೧||
ಪ್ರತಿ ಮನೆಯ ಅಂಗಳವು ಆಲಯ ನಿನಗೆ
ಪ್ರತಿ ಮನೆಯ ಸುಮಂಗಲಿಯು ಭಕ್ತರು ನಿನಗೆ |
ಅರಿಶಿನ ಕುಂಕುಮದ ಸೌಭಾಗ್ಯ ತಾರೆ
ಆರೋಗ್ಯದ ಕಲ್ಪತರು ನೀನಾಗು ಬಾರೆ||೨||
ಉತ್ಥಾನ ದ್ವಾದಶಿಯ ಪುಣ್ಯದ ದಿನದೇ
ಚಂದನ ಧೂಪಾದಿಗಳ ನೀಡುವೆ ನಿನಗೆ |
ನೀನಗುವ ಮನೆಯೊಳಗೇ ಹಾಲಿನ ಹೊಳೆಯು
ನೀನೊಲಿಯೇ ಮನ ನಲಿಯೇ ಸುಖದ ಮಳೆಯೇ||೩||
0 ಕಾಮೆಂಟ್ಗಳು