ಸಿಂಗಾರ ಗೌರಿ ಬಾರೆ - Singara Gowri Bare

|| ಸ್ವರ್ಣ ಗೌರಿಯ ಹಾಡು |



ಸಿಂಗಾರ ಗೌರಿ ಬಾರೆ

ಬಂಗಾರ ಮನವ ನೀಡೆ ||


ಅರಿಸಿನದಿ ಮೊಗವ ಸಿಂಗರಿಸಿ

ಕುಂಕುಮದಿ ನೊಸಲು ಶೋಭಿಸಿ

ಮಲ್ಲೆದಂಡೆಯ ಚಂದ ಮುಡಿಸಿ

ಶುಭತಾರೆ ಗೌರಿ ಶುಭನರಸಿ ||೧||


ಶಿವನ ಅರ್ಧಾಂಗಿ ಸಿರಿಗೌರಿ

ಭಾಧ್ರಪದಕೆ ನೀ ಸ್ವರ್ಣಗೌರಿ

ಕೈಲಾಸ ತಪೋ ಮೌನ ನಿರತಳೆ

ಎಲ್ಲರ ಹರಸು ನೀ ಮಂಗಳೆ ||೨||


ಮಾನಸ ಪೂಜೆಗೊಲಿವ ಗೌರಿ

ಮಗನ ಕೂಡೆ ದರ್ಶನವೀವ ಗೌರಿ

ಮನೆಮನೆಯ ಸಿರಿಯೆ ಸುವಾಸಿನಿ

ಸೆರಗೊಡ್ಡಿ ಬೇಡುವೆನೆ ಸುಮಂಗಲಿ ||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು