|| ದುರ್ಗಾ ಸ್ತುತಿ ||
ತೋರಿಸೇ ಹರಿ ಚರಣ|
ಶ್ರೀ ಮಾತೇಯ ಗೈಯುವೆ ತವ ಸ್ಮರಣ||ಪ||
ಪರಿ ಪರಿಯಿಂದಲಿ ಪಾರಾಯಣ ಗೈವೆ
ಪರಮ ಪುರುಷ ಹರಿ|ಕರುಣ ಸಾಯುಜ್ಯವು
ನವ ಶಕ್ತಿ ರೂಪದಲ್ಲಿ ಅವತರಿಸಿ
ನೀ ಅವನಿಯ ಪೊರೆದಿರುವೆ|
ಕವಿದ ತಮವ ನೀಗಿ ಸುವಿಚಾರವು ಮೂಡಿ
ಅವಿನಾಶೀ ಶ್ರೀ ಹರಿ ಮನದಿ ವಾಸಿಸುವಂತೆ||೧||
ನೊಂದು ಬೆಂದಿಹ ಮನವಾ|ನಿಗ್ರಹಿಸಲು ಶೀಘ್ರದಿ
ಅನುಗ್ರಹಿಸು ಭಗ್ನಗೊಳಿಸುತ ಭವ ತಾಪಗಳೆಲ್ಲವಾ
ಹರಿ ನಾಮದಿ ಮನ ಮಗ್ನವಾಗುವ ತೆರದಿ||೨||
ಆದಿ ಅಂತ್ಯ ರಹಿತಳೇ|
ಮೊದದಿ ನಿನ್ನ ಪಾದವ ಪೂಜಿಸುವೆ|
ವೇದ ದಾಯಿನಿಯೇ ಧೀ ಶಕ್ತಿ ಪ್ರೇರಿಪ
ಶ್ರದ್ದಾ ಮೇಧಾಯಶಾ ಪ್ರಜ್ಞೆಯ ಕರುಣಿಸು ದುರ್ಗೆಯೆ||೩||
0 ಕಾಮೆಂಟ್‌ಗಳು