ಆಡುವ ಕುಣಿಯುವ ಬಾ ಕೃಷ್ಣ - Aduva Kuniyuva Baa Krishna

 || ಕೃಷ್ಣ ಭಜನೆ ||




ಆಡುವ ಕುಣಿಯುವ ಬಾ ಕೃಷ್ಣ

ನಿನ್ನನೇ ಭಜಿಸುವೆ ಬಾ ಕೃಷ್ಣ

ನಾಟ್ಯವ ಆಡುತ ಬಾ ಕೃಷ್ಣ

ಕೊಳಲನು ಹಿಡಿದ ಮುರಳಿ ಕೃಷ್ಣ

ಗೋವನು ಹಿಡಿದ ಗೋಪಾಲ ಕೃಷ್ಣ


ಮನವನು ಕುಣಿಸುವ ಮೋಹನ ಕೃಷ್ಣ

ಯೋಗ ಸ್ವರೂಪನೆ ಗೀತಾ ಕೃಷ್ಣ

ಸತ್ಯ ಬ್ರಹ್ಮನೇ ಸಾಕ್ಷಾತ್ಕಾರ ಕೃಷ್ಣ

ನಟಿಸುವವನು ನೀನಲ್ಲ ಕೃಷ್ಣ

ಸತ್ಯದ ಮರ್ಮವ ತಿಳಿಸುವ ಕೃಷ್ಣ


ಧರ್ಮ ರಥವನು ಹಿಡಿದ ಸಾರಥಿ ಕೃಷ್ಣ

ದೈವ ಧರ್ಮ ಪಾಲಕ ಕೃಷ್ಣ

ಗೋಪಿಕಾ ವಲ್ಲಭ ಗೋಪಿ ಕೃಷ್ಣ

ಪ್ರೇಮ ಸ್ವರೂಪನೇ ರಾಧಾಕೃಷ್ಣ

ಬೆಣ್ಣೆಯ ಹಂಚುವ ಮುದ್ದು ಕೃಷ್ಣ


ದಾಸರ ಕುಣಿಸಿದ ಯೋಗಿ ಕೃಷ್ಣ

ದಾನ ಧರ್ಮದ ತದ್ರೂಪ ಕೃಷ್ಣ

ಪಂಚ ಪಾಂಡವರ ಲೀಲಾ ಕೃಷ್ಣ

ಮಾನ ಸನ್ಮಾನ ದ್ರೌಪದಿ ಸಂರಕ್ಷಕ ಕೃಷ್ಣ

ದೇವಕಿ ಯಶೋಧೆ ಕಿಶೋರ ಕೃಷ್ಣ


ಬಾರೋ ಬಾರೋ ಬಾರಯ್ಯ

ಕುಣಿಯುವ ಮನಸನು ಹಿಡಿಯಲು ಬಾ

ಹರಿಯಾಗಿ ಕೃಪೆಯನು ಹರಿಸಲು ಬಾ  

ಗಂಧ ಸೌಗಂಧ ಚಂದನ ಲೇಪಿತ

ಪರಬ್ರಹ್ಮ ಸ್ವರೂಪ ಪ್ರೇಮ ಸುತ ಕೃಷ್ಣನೆ ಬಾ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು