ಅರತಿಯನು ಬೆಳಗಬನ್ನಿರಿ - Arathiyanu Belaga Banniri

|| ನವರಾತ್ರಿಯ ದಶಮಿಗೆ ಆರತಿ ಹಾಡು ||




ಅರತಿಯನು ಬೆಳಗಬನ್ನಿರಿ ಅಂಬೆಗೆ ತ್ರಿಪುರಾಂಬೆಗೆ

ತಾರಕಾಂತಕ ಕಾರ್ತಿಕೇಯನ ಮಾತೆಗೆ ಗಿರಿಜಾತೆಗೆ 

ಶರಭರೂಪನ ವೃಷಭರೂಢನ ಶ್ರೀಮತಿ ಸಿರಿಗೌರಿಗೆ

ಪರಮಪಾವನೆ ಆದಿಶಕ್ತಿಗೆ ಪ್ರಥಮ ಪೂಜ್ಯನ ಮಾತೆಗೆ


ಕಮಲವಾಸಿನಿ ಕಮಲಗಂದಿನಿ ಕಾಮಿತ ಫಲದಾತೆಗೆ

ವಿಮಲರೂಪಿಣಿ ವೇದಜನನಿ ವಾಣಿ ವೀಣಾಪಾಣಿಗೆ

ತಮವತರಿವ ಜ್ಞಾನದಾತೆಗೆ ವರದೆ ನಾರದಮಾತೆಗೆ

ಅಮಲಶೀಲೆಗೆ ಲಲಿತೆಗೆ ಅಜನ ಪಟ್ಟದ ರಾಣಿಗೆ


ಕನಕಮಾಲಿನಿ ಕಮಲಹಸ್ತೆಗೆ ಕಾಮಜನನಿಗೆ ಜಲಜೆಗೆ

ಜನಕರಾಜನಕುವರಿ ಸೀತೆಗೆ ಸಕಲ ಸಂಪದದಾತೆಗೆ

ಧನಕೆದೇವತೆ ಕನಕಶೋಭಿತೆ ಶರಧಿಜಾತೆ ಪುನೀತೆಗೆ

ಸನಕವಂದಿತ ರಾವಣಾಂತಕ ಸಿರಿಕೃಷ್ಣ ಹೃದಯ ನಿವಾಸಿಗೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು