|| ವಿಠ್ಠಲ ನಾಮ ||
ಬಂದ್ಯಾ ವಿಠ್ಠಲ ಬಡವನಲ್ಲಿ||2||
ವ್ರಂದಾವನದಲ್ಲಿ ಗೋವೃಂದಗಳ ಕಾಯ್ದವನೆ
||ವ್ರಂದಾವನದಲ್ಲಿ||
|| ಬಂದ್ಯಾ||
ಕೊರಳಲಿ ಸರಿಗೆ ಸರಪಳಿ,ಪಚ್ಚೆ ಪದಕವು
ಪರಿಪರಿಯ ಹಾರ ಶ್ರೀ ತುಳಸಿಮಾಲೆ
||ಕೊರಳಲಿ||
ಸಿರಿಗಂಧ ಲೇಪ ಶ್ರೀವತ್ಸವುರ ಕಿರಿಡೊಳ್ಳು||2||
ವರಕಟಿಗೆ ಘಂಟೆ ಪರಿಪರಿಯಧಾಮವ ಸುತ್ತಿ
||ಬಂದ್ಯಾ||
ಸುಳಿಗುರುಳು ಮೇಲೆ ,ಅರಳೆಲೆಯು ಕಿರೀಟ
ಎಲೆ ತಳಿರು ಚೂತ ,ಮಳ್ಳಿಗೆಯು ಧೂರ್ವೆ
||ಸುಳಿಗುರುಳು||
ತಳತಲಿಪ ಮುಖನಾಸ ನಯನ ಹಣೆಯಲಿ ತಿಲಕ
||ತಳತಲಿಪ||
ಚಲಿಸುವ ಕರ್ಣಕುಂಡಲ ಪ್ರಭೆಯು ಶೋಭಿಸುತ
||ಬಂದ್ಯಾ||
ಮುಂಗೈ ಕಡಗ ಸರಪಳಿ ತೋಳ ಬಾಪುರಿ
ಶ್ರಂಗಾರವಾದ ಗದೆ ಶಂಖ ,ಚಕ್ರ
||ಮುಂಗೈ||
ಅಂಗೈಯ ಪದುಮ,ಅಂಗುಲಿ ವೇಣು ಮೀಟುತ
||ಅಂಗೈಯ||
ಹಿಂಗದೆ ಎನ್ನ ಅಂತರಂಗದ ಮನೆಗಿನ್ನು
||ಬಂದ್ಯಾ||
ಈಸುಬಗೆಯ ಪೂಜೆಯು ಎನ್ನಿಂದಲಾಗದು
ಲೇಶವಾದರು ಇಲ್ಲ ಎನಗೆ ಜ್ಞಾನ
||ಈಸುಬಗೆಯ||
ಶ್ರೀಶನೆ ನೀ ನಂತಲ್ಲಿ ಸಕಲವು ಉಂಟು||ಶ್ರೀಶನೆ||
ಶ್ರೀ ಶ್ರೀನಿವಾಸ ಗೋಪಾಲವಿಜಯವಿಠ್ಠಲ
||ಬಂದ್ಯಾ||
0 ಕಾಮೆಂಟ್‌ಗಳು