ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ- Ettire Kemparathi Nityege Satyege

|| ದುರ್ಗಾ ಆರತಿ ಹಾಡು ||




ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ

ತನ್ನೀರೆ ತಂಪಾರತಿ ಐದೆಗೆ ಮುತ್ತೈದೆಗೆ||ಎತ್ತಿರೇ||


ಖಡ್ಗ ಶೂಲದ ಅಭಯಹಸ್ತೆಗೆ

ಶಂಕರನರಸಿ ದುರ್ಗೆಗೆ |

ಅನ್ನವನಿಕ್ಕುತ ಆರ್ತರ ಕಾಯುವ

ಅನ್ನಪೂರ್ಣೆಗೆ ಆನನ್ಯಗೆ |

ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ

ತನ್ನೀರೆ ತಂಪಾರತಿ ಐದೆಗೆ ಮುತ್ತೈದೆಗೆ ||೧||


ಕುಂದಪುಷ್ಪ ಮಣಿ ಮುತ್ತಿನ ಹಾರ

ಅಂದದಿ ಧರಿಸಿಹ ಶಾರದೆಗೆ |

ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ

ಚೆಂದದ ವೀಣೆಯ ಕರದಲಿ ಪಿಡಿದಿಹ |

ಇಂದಿರಾಸನನ ಅರಸಿಗೆ ತನ್ನಿರೆ

ತಂಪಾರತಿ ಐದೆಗೆ ಮುತ್ತೈದೆಗೆ ||೨||


ಶಂಖಚಕ್ರ ವರಪದ್ಮ ಪಾಣಿಗೆ

ಚಾಮುಂಡಿ ಮೂಕಾಂಬಿಕೆಗೆ |

ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ

ಐಸಿರಿ ನೀಡುವ ಶ್ರೀ ಧನಲಕ್ಷ್ಮಿಗೆ |

ಹರಿ ಅರಸಿ ನಾರಾಯಣಿಗೆ ತನ್ನೀರೆ

ತಂಪಾರತಿ ಐದೆಗೆ ಮುತ್ತೈದೆಗೆ ||೩||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು