|| ನಾರಾಯಣ ಸ್ತುತಿ ||
ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವು ಎನ್ನ ನಾಲಿಗೆಗೆ ಬರಲಿ||ಪ||
ಕಷ್ಟದಲ್ಲಿರಲಿ , ನಿಕೃಷ್ಟದಲ್ಲಿರಲಿ,
ಎಷ್ಟಾದರೂ ಮತಿಗೆಟ್ಟು ಇರಲಿ
ಕೃಷ್ಣ ಕೃಷ್ಣಾ ಎಂದು ಶಿಷ್ಟರು ಕೂಗುವ |
ಅಷ್ಟಾಕ್ಷರ ಮಹಾ ಮಂತ್ರದ ನಾಮವ ||೧||
ಸಂತತ ಹರಿ ನಿನ್ನ ಸಾಸಿರ ನಾಮದ |
ಅಂತರಂಗದಾ ಒಳಗಿರಿಸೆ ಎಂತೋ |
ಪುರಂದರ ವಿಠಲ ರಾಯನೆ |
ಅಂತ್ಯ ಕಾಲದಲ್ಲಿ ಚಿಂತಿಸೋಹಾಗೆ ||೨||
0 ಕಾಮೆಂಟ್‌ಗಳು