|| ಕೃಷ್ಣ ಸ್ತುತಿ ||
ಭಕ್ತರ ಬಾಂಧವ.. ||ಪ||
ನಿನ್ನ ಭಕುತಿಯನು ಬೀರೊ ಎನ್ನ
ಮನ್ನಿಸಿ ಸಲಹುವರಾರೋ |
ಸನ್ನುತ ಸನ್ಮಾರ್ಗ ತೋರೋ
ಆಪನ್ನರಕ್ಷಕ ಬೇಗ ಬಾರೋ||
ಪನ್ನಗಶಯನ ಲಕ್ಷ್ಮೀಶಾ
ವೇದಸನ್ನುತ ಪಾದ ಸರ್ವೇಶಾ
ಇನ್ನು ಬಿಡಿಸು ಭವಪಾಶಾ
ಪ್ರಸನ್ನ ರಕ್ಷಿಸೊ ಶ್ರೀನಿವಾಸಾ||೧||
ನಾರದ ಗಾನವಿಲೋಲಾಸ್ವಾಮಿ
ಭೂರಿ ಭಕ್ತರ ಪರಿಪಾಲಾ
ಶ್ರೀ ರಮಣ ಕರುಣಾಲವಾಲ
ದೇವನೀರದ ಶ್ಯಾಮ ಗೋಪಾಲಾ||೨||
ಕರಿರಾಜವರದ ಪ್ರಮೇಯಾ
ಎನ್ನನರಿತು ನಡೆಸೊ ಯೋಗಿಧ್ಯೇಯ ||
ಸುರಮುನಿ ಹೃದಯ ನಿಕಾಯ
ನಮ್ಮ ಪುರಂದರ ವಿಠಲರಾಯಾ ||೩||
0 ಕಾಮೆಂಟ್‌ಗಳು