|| ಲಕ್ಷ್ಮಿ ಸ್ತುತಿ ||
ಕರುಣದಿ ಕಣ್ಣು ತೆರೆಯೆ ಬಾರಮ್ಮ ಸಿರಿಯೆ IIಪII
ಧರಣಿಯೊಳಗೆ ಸುಂದರತರ ಕೊಲ್ಹಾ-
ಪುರ ವಾಸಿನಿ ಭಕುತರ ಸದಾ ಪೊರೆಯೇ IIಅಪII
ವಿಧಿಭವಾದಿಗಳ ಸದನಗಳಿಗೆ ಅ-
ಭ್ಯುದಯ ಕಟಾಕ್ಷದಿ ಸುದಯವ ಸುರಿಸೆ II೧II
ಕಡು ಬೆಡಗಿನ ನಿನ್ನಡಿ ದಾವರೆಗಳ
ಬಿಡದೆ ಭಜಿಪರಿಗೆ ವರ ಕೊಡು ಸುಂದರಿಯೆ II೨II
ಸುಂದರಾನನೆ ಅರವಿಂದ ಮಲ್ಲಿಗೆ
ಮಂದಹಾಸ ಮಕರಂದವ ಸುರಿಯೆ II೩II
ಬಡವರಭೀಷ್ಟವ ಕೊಡುವಳೆಂದು ಬಡ
ಬಡಿಸಿ ಬಂದೆ ನಿನ್ನೊಡಲಿನ ಮರಿಯೆ II೪II
ಕೊಟ್ಟರೆ ಕಮಲೇಶ ವಿಠಲರಾಯನ
ಪಟ್ಟದರಸಿಯೆಂಬೊ ಕಟ್ಟಲೆ ಕರೆಯೆ II೫II
0 ಕಾಮೆಂಟ್‌ಗಳು