|| ಹರಿ ಸ್ತುತಿ ||
ನಾಚಿಕೆ ಗೊಳಬೇಡ ಮನದಲ್ಲಿ ಯೋಚಿಸಿ ಕೆಡಬೇಡ !
ನೀಚವೇನೊ ನಮ್ಮಚ್ಯುತನೋಲಗ
ಮೆಚ್ಚಿ ಕೊಟ್ಟಿದೆ ನಿನಗ್ಹೆಚ್ಚಿನ ಪದವಿಯು||ಪ||
ಹರಿ ಹರಿಯೆಂದೊದರೋ- ಹತ್ತಿದ
ದುರಿತ ಗಳಿಗೆ ಬೆದರೋ
ನೀರಜಾಕ್ಷ ನಿರ್ಜರ ಪತಿ ಹರಿಯೆಂದು
ಚೀರಿ ಹಾರಿ ಭೋರಿಡುತಲಿ ಕುಣಿಯೋ||೧||
ಯಾರ ಗೊಡವೆಯೇನೋ ದಾರಿ ತಪ್ಪಿಪರೇನೊ
ಸಾರಿ ಸಾರಿಗೆ ಸರ್ವೇಶನ ನಾಮವ, ಬೀರಿ ಬೀರಿ
ಕೈ ಮುಗಿದು ಕೊಂಡಾಡೋ||೨||
ಭಕ್ತಜನರ ಕೂಡೋ- ಭವ ಭಯ,
ಬತ್ತಿ ಪೋಪುದು ನೋಡೋ
ಮುಕ್ತಿದಾಯಕ ಶ್ರೀಪುರಂದರವಿಠಲನ
ಭಕ್ತಿಯಿಂದ ನೀ ಪಾಡುತ ಕುಣಿಯೋ||೩||
0 ಕಾಮೆಂಟ್‌ಗಳು