|| ರಾಘವೇಂದ್ರ ಸ್ತುತಿ ||
ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ
ನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ
||ರಾಘವೇಂದ್ರ||
ತಂದೆ ತಾಯಿ ಬಂಧು ಬಳಗ
ಎಲ್ಲ ನೀನೆ ಎನ್ನಿರಿ
ನಾನು ಎಂಬ ಮೋಹ ಮರೆತು
ಎಂದೂ ಅವನ ನಂಬಿರಿ||ತಂದೆತಾಯಿ||
ಹೇಗೆ ಇರಲಿ ಎಲ್ಲೆ ಇರಲಿ...
ಅವನ ಸ್ಮರಣೆ ಮಾಡಿರಿ
ಧ್ಯಾನದಿಂದ ಮನವ ಸುಡುವ
ಚಿಂತೆ ದೂರ ಮಾಡಿರಿ||ರಾಘವೇಂದ್ರ||
ಮಾನ ಪ್ರಾಣ ಧನವು ಎಲ್ಲ
ಸ್ವಾಮಿ ನಿನ್ನದೆನ್ನಿರಿ
ಗುರುವೆ ನಿನ್ನ ಕರುಣೆಯೊಂದೆ
ಸಾಕು ನನಗೆ ಎನ್ನಿರಿ||ಮಾನಪ್ರಾಣ||
ಕಲ್ಲು ಮುಳ್ಳೊ ಸಿಡಿಲೊ ಮಳೆಯೊ
ಅವನ ಕರುಣೆಯೆನ್ನಿರಿ
ಏನೇ ಬರಲಿ ಅವನದೆಂದು
ನಂಬಿ ಮುಂದೆ ನಡೆಯಿರಿ||ರಾಘವೇಂದ್ರ ||
ನಿಮ್ಮ ಮನೆಯ ನಿಮ್ಮ ಮನದ
ವಿಷಯವೆಲ್ಲ ಬಲ್ಲನು
ಚಪಲದಿಂದ ಅಲೆವ ಮನದಲೆಂದು
ಗುರುವು ನಿಲ್ಲನು||ನಿಮ್ಮ ಮನೆಯ||
ಕೊಡುವುದೆಲ್ಲ ಕೊಡುವನವನು
ಇನ್ನು ಆಸೆಯೇತಕೆ
ಕಲ್ಪವೃಕ್ಷದಂತೆ ಗುರುವು
ಇರಲು ಚಿಂತೆಯೇತಕೆ||ರಾಘವೇಂದ್ರ||
ಪೂಜ್ಯಾಯ ರಾಘವೇಂದ್ರಾಯ
ಸತ್ಯಧರ್ಮವ್ರತಾಯಚ
ಭಜತಾಂ ಕಲ್ಪವೃಕ್ಷಾಯ
ನಮತಾಂ ಕಾಮಧೇನುವೆ
0 ಕಾಮೆಂಟ್‌ಗಳು