ಗುಮ್ಮನ ಕರೆಯದಿರೆ ಅಮ್ಮ ನೀನು - Gummana Kareyadire Amma Neenu


||ಪುರಂದರದಾಸರ ದೇವರಾನಾಮ||




ಗುಮ್ಮನ ಕರೆಯದಿರೆ , ಅಮ್ಮ ನೀನು

ಗುಮ್ಮನ ಕರೆಯದಿರೆ ||ಪ||

ಸುಮ್ಮನೆ ಇದ್ದೇನು, ಅಮ್ಮಿಯ ಬೇಡೆನು

ಮಮ್ಮು ಉಣುತೇನೆ ಅಮ್ಮ ಅಳುವುದಿಲ್ಲ||ಅ.ಪ||


ಹೆಣ್ಣುಗಳಿರುವಲ್ಲಿಗೆ ಹೋಗಿ ಅವರ

ಕಣ್ಣು ಮುಚ್ಚುವುದಿಲ್ಲವೆ

ಚಿಣ್ಣರ ಬಡಿಯೆನು , ಅಣ್ಣನ ಬೈಯೆನು

ಬೆಣ್ಣೆಯ ಬೇಡೆನು , ಮಣ್ಣು ತಿನ್ನುವುದಿಲ್ಲ ||೧||


ಬಾವಿಗೆ ಹೋಗೆ ಕಾಣೆ , ಅಮ್ಮ ನಾನು

ಹಾವಿನೊಳಾಡೆ ಕಾಣೆ

ಆವಿನ ಮೊಲೆಯೂಡೆ , ಕರುಗಳ ಬಿಡೆ ನೋಡೆ

ದೇವರಂತೆ ಒಂದು ಠಾವಿಗೆ ಕೂಡುವೆ ||೨||


ಮಗನ ಮಾತನು ಕೇಳುತ , ಗೋಪೀದೇವಿ

ಮುಗುಳುನಗೆಯ ನಗುತ

ಜಗದೊಡೆಯ ಶ್ರೀ ಪುರಂದರವಿಠಲನ

ಬಿಗಿದಪ್ಪಿಕೊಂಡಳು ಮೋಹದಿಂದಾಗ ||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು