|| ಲಕ್ಷ್ಮಿ ಸ್ತುತಿ ||
ಕರುಣದಿ ಎನ್ನ ಪೊರೆಯೇ
ತೋರಮ್ಮ ಸಿರಿಯೇ ||ಪ||
ಶರಣರ ಪೊರೆಯುವ ಕರುಣಿಯೆ ನಿನ್ನಯ
ಚರಣಯುಗಕೆ ನಾ ಶರಣು ಮಾಡಿದೆ ದೇವೀ||ಅ.ಪ||
ವಾರಿಜಾಂಬಕೆ ಅಂಭ್ರಣೀ ಶ್ರೀ ಹರಿಯ ರಾಣಿ
ಮಾರಾರಿ ಮುಖಸುರ ಸಂತ್ರಾಣಿ
ವಾರವಾರಕೆ ನಿನ್ನ ಸಾರಿಭಜಿಪೆ ಎನ್ನ
ದೂರ ನೋಡದೆ ಪೊರಿಭಾರ ನಿನ್ನದು ತಾಯಿ||
ಸೃಷ್ಟಿ ಸ್ಥಿತಿಲಯ ಕಾರಿಣೀ ಸುಗುಣಸನ್ಮಣಿ
ಕಷ್ಟ ದಾರಿದ್ರ್ಯ ದುಃಖ ಹಾರಿಣೀ
ದುಷ್ಟರ ಸಂಗದಿ ಕೆಟ್ಟಿಹ ಎನ್ನನು
ಥಟ್ಟನೆ ಕರುಣಾದೃಷ್ಟಿಲಿ ನೋಡಿ ||
ಜಾತರೂಪಳೆ ಶುಭಗಾತ್ರಿ ತ್ರಿಜಗಕೆ ಧಾತ್ರೀ
ಸೀತೆ ಸತ್ರಾಜಿತನ ಪುತ್ರಿ
ದಾತ ಗುರುಜಗನ್ನಾಥವಿಠಲನ
ನೀತ ಸತಿಯೆ ಎನ್ನಮಾತೆ ವಿಖ್ಯಾತೇ ||
0 ಕಾಮೆಂಟ್‌ಗಳು