ಪಂಢರಾಪುರವೆಂಬ ದೊಡ್ಡ ನಗರ - Pandarapuravemba Dodda Nagara

|| ಪಾಂಡುರಂಗ ಭಜನೆ ||




ಪಂಢರಾಪುರವೆಂಬ  ದೊಡ್ಡ ನಗರ

ಅಲ್ಲಿ ವಿಠೋಬನೆಂಬ ಸಾಹುಕಾರ

ವಿಠೋಬನಿರುವದು ನದಿತೀರ

ಅಲ್ಲಿ ಪಂಢರಿಭಜನೆ ವ್ಯಾಪಾರ ||ಪ.||


ತಂದೆ ನೀನೆ ತಾಯಿ ನೀನೆ ಪಾಂಡುರಂಗ

ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ

ಭಕ್ತರ ಪೋಷಕ ಪಾಂಡುರಂಗ

ನಮ್ಮ ಮುಕ್ತಿದಾಯಕ ಪಾಂಡುರಂಗ ||೧||


ವಿಠೋಬನಿಗೆ ಪ್ರಿಯ ತುಳಸಿಹಾರ

ಅಲ್ಲಿ ಭಕ್ತ ಜನರ ವ್ಯಾಪಾರ

ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ

ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||೨||


ಶ್ರೀಹರಿ ವಿಠಲ ಪಾಂಡುರಂಗ

ಜಯ ಹರಿ ವಿಠಲ ಪಾಂಡುರಂಗ

ವಿಠಲ ವಿಠಲ ಪಾಂಡುರಂಗ

ನಮ್ಮ ಪುರಂದರ ವಿಠಲ ಪಾಂಡುರಂಗ ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು