ಸೋಮಶಿವ ಶರ್ವ ಭವ - Somashiva Sharva Bhava

|| ಶಿವ ಸ್ತುತಿ ||

ರಚನೆ r




ಸೋಮಶಿವ ಶರ್ವ ಭವ ಶಿತಿಕಂಠ ನಿನ್ನಪದ

ತಾಮರಸಯುಗಗಳಿಗಾನಮಿಸುವೆ ||ಪ||

ಕಾಮಹರ ಕೈಲಾಸ ಹೇಮಗಿರಿಯಾವಾಸ

ರಾಮನಾಮನ ಭಜಿಪ ಉಮೆಯರಸ ಶಂಭೋ||ಅ.ಪ||


ಗೋಪತಿ ಧ್ವಜ ಘೋರ ಪಾಪ ಸಂಹರಣ ಹರಿ

ತೋಪಲೋಪಮ ಕಂಠ ಚಾಪಪಾಣೀ

ಶ್ರೀ ಪತಿಯ ಶ್ರೀನಾಭಿ ಕೂಪಸಂಭವತನಯ

ನೀ ಪಾಲಿಸೆಮ್ಮನು ವಿರೂಪಾಕ್ಷ ಗುರುವೆ ||೧||


ಮೃತ್ಯುಂಜಯ ಮೃಗಾಂಕ ಕೃತ್ತಿವಾಸ ಕೃಪಾಳೊ

ವಿತ್ತಪತಿ ಸಖ ವಿನಾಯಕರ ಜನಕ

ನೃತ್ಯವರ್ಗಕೆ ಬಾಹ ಅಪಮೃತ್ಯು ಕಳೆದು ಸಂ

ಪತ್ತು ಪಾಲಿಸುವುದು ನಿವೃತ್ತಿ ಸಂಗಮಪ ||೨||


ಭಸಿತ ಭೂಷಿತ ಡಮರು ತಿಸುಳಗೈಯನೆ ಶಂಭೋ

ಕಿಸಲಯೋಪಮ ರವಿ ಶಶಿಭೂಷಣ

ಅಸುರಾರಿ ಶ್ರೀ ಜಗನ್ನಾಥ ವಿಠಲನ ಪದ

ಬಿಸಜ ಧ್ಯಾನವನೀಯೊ ಹಸನಾಗಿ ಕಾಯೊ ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು