|| ದೇವರ ನಾಮ ||
ರಚನೆ : ಪುರಂದರದಾಸರು
ರಂಗ ಬಂದ ಮನೆಗೆ ಶೃಂಗಾರ ನೋಡಿರೋ |
ಹಿಂಗದಂಥ ಬಡತನ ಭಂಗವಾಗಿ ಹೋಯಿತೋ||ಪ||
ಹೊತ್ತಾರೆ ಎದ್ದು ಹೋಗಿ ಪರರ ನೃತ್ಯನಾಗಿ ದುಡಿದರೆ |
ತುತ್ತು ಅನ್ನ ಕಾಣದೆ ನಾ ಭಂಗ ಪಟ್ಟೆನು ||
ಇತ್ತಲಾಗಿ ರಂಗ ಬರಲು ಸುತ್ತಿಕೊಂಡ ಬಡತನ |
ಎತ್ತ ಹೋಯಿತೋ ಏನಾಯಿತೋ ಕಾಣಬಾರದು ||೧||
ಹುಟ್ಟಿದ್ದು ಮೊದಲು ನಾನು ಮೆಟ್ಟಿ ತುಳಿವೆ ದೇಶವೆಲ್ಲ |
ಇಟ್ಟೆನೆಂದರೆ ಸೊಟ್ಟ ಕಿವಿಗೆ ಗಟ್ಟಿ ಮುರುವು ಕಾಣೆನೊ ||
ವಿಟ್ಠಲ ಮನೆಗೆ ಬರಲು ಸೃಷ್ಟಿಯೊಳಗಿಲ್ಲದಂಥ |
ಅಷ್ಟ ಸೌಭಾಗ್ಯಗಳ ಮೆಟ್ಟಿ ತುಳಿದೆನೋ ||೨||
ಹಿಂದೆ ರಂಗನ ಭಜಿಸದೆ ಅನೇಕ ಭಂಗವ ಪಟ್ಟಿ
ಮುಂದೆ ರಂಗನ ಭಜಿಸಲು ಸುಕೃತ ಫಲವು ||
ತಂದೆ ಪುರಂದರ ವಿಟ್ಠಲನ್ನ ಹೊಂದಿ ಭಜಿಸಲಾಗಿ
ಬಂದನು ಭಾಗ್ಯದ ಸಿರಿ ಲಕುಮಿಯನೊಡಗೂಡಿ ||೩||
0 ಕಾಮೆಂಟ್‌ಗಳು