ಅಂದದಾರತಿ ಬೆಳಗುವ - Andadaarathi Belaguva

 || ಶ್ರೀ ಗೌರೀ ಗಣೇಶ ಆರತಿ ||




ಅಂದದಾರತಿ ಬೆಳಗುವ ಅಗಜೆ ಗೌರಮ್ಮಗೆ |

ಮಂಗಳಾರತಿ ಗೌರೀಪುತ್ರ ವರ ಗಣಪನಿಗೆ ||೧||


ಮಂಗಳಾರತಿ ಮಂಗಲೇ ಗೌರಮ್ಮ ಪಾದಕ್ಕೆ |

ಮುದದಾರತಿ ಶಿವಪುತ್ರ ಗಣಪ ಪದ್ಮಾಂಘ್ರೀಗೆ ||೨||


ಮಡಿಲಕ್ಕಿಯ ಅರ್ಪಿಸಿ ಮನದಿಚ್ಛೆಯ ಬೇಡಲು

ಆರತಿ ಸತೀ ಸಾಧ್ವೀ ಪಾರ್ವತೀಗೆ |

ಮಹಾ ಮಂಗಳಾರತಿ ಇಭವಕ್ತ್ರ ವಿಘ್ನೇಶ

ಸಿದ್ಧಿಬುದ್ಧಿಪತಿ ಗೌರೀಪುತ್ರನಿಗೆ ||೩||


ಜಗದಂಬಾ ಸುತ ಗಣನಾಥನ ಆರತಿ

ಕಾಂಕ್ಷಿತಾರ್ಥ ಪ್ರದ ಪಾದದಲಿ ;

ಜಗನ್ಮಾತೆ ಗೌರೀ ನಗುವಿನಾರತಿ ಬೆಳಗುತ

ಮನದಾಸೆ ಹರಕೆ ಆರತಿ ಅಮ್ಮನಲಿ ||೪||


ಜಯ ಜಯತು ಮಂಗಳ ಗೌರಮ್ಮ ಸೌಭಾಗ್ಯ

ಆರತಿ ಬ್ರಾಹ್ಮರೀ ಭಾರ್ಗವೀ ಭಗವತಿಗೆ |

ಜಯತು ಲಂಭೋದರ ಶ್ರೀಪಾದದಾರತಿ

ಷಣ್ಮುಖಾಗ್ರಜ ಆದಿಪೂಜಿತಗೆ ||೫||


ಮಂಗಳ ಸ್ತುತಿಪದ್ಮ ಮರ್ಮಜ್ಞ ಹೃತ್ಪದ್ಮ

ಮಹಾಪೂಜಾರತಿ ಮಂಗಳಾದೇವಿ ಪದ್ಮಾಂಘ್ರೀಗೆ|

ಮಂಗಳೆಯರ ಮನೋ ಅಹ್ಲಾದಾರತಿ ನಿಮ್ಮಡಿಗೆ

ವರನೀಡಿ ಗಣಪ ಶ್ರೀಮಾತಾ ಗೌರಮ್ಮನೆ||೬||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು