|| ದೇವಿ ಹಾಡು ||
ದೇವಿ ವರಲಕ್ಷ್ಮಿ ಭಕ್ತರ ಕಾಯ್ವಿ
ಕರುಣದಿ ವರವ ನೀಡಿ||
ಸಿಂಧುಶಯನನ ದಯೆ
ಎಂದೆಂದು ಬಿಡದಂತೆ
ಚಂದದಿ ಕರುಣಿಸೆ ಇಂದಿರೇನಮಗೆ||
ಮಂದಗಮನೆಯರು ತಂದಮಂದಾರಮಲ್ಲಿಗೆ
ಗಂಧ ಕುಂಕುಮದಿಂದ ಚಂದಾಗಿ
ಅರ್ಚಿಸೆ ದೇವಿ ನಿನಗೆ||
ಮಿತ್ರವಿಂದಾದಿಗಳಿಂದ
ಮತ್ತೊಮ್ಮೆ ಲಕುಮಿಯೆ
ಮುತ್ತು ರತ್ನದ ವಸ್ತು ವಸ್ತ್ರ ವೀಳ್ಯವ ಕೊಳ್ಳದೇವಿ||
ನಗಧರ ರಾಮೇಶನು
ಅಗಲದಂತೆ ನಮ್ಮ
ಮುಗಿದೇವು ಕರಗಳ ನಗೆಮುಖದ ಗೌರಿ ನಿನಗೆ ದೇವಿ||
0 ಕಾಮೆಂಟ್ಗಳು