|| ದೇವಿ ಹಾಡು ||
ಏಳಮ್ಮ ಕಾಮಾಕ್ಷಿ ಜಗದ ಒಡತಿ |
ಬೆಳ್ಳನೆಬೆಳಗಾಯ್ತು ಏಳಮ್ಮ ಜನನಿ ||ಪ||
ಎಲ್ಲರ ಚೈತನ್ಯ ಶಕ್ತಿಯು ನೀನಮ್ಮ |
ಮೆಲ್ಲನೆ ಕಣ್ತೆರೆದು ದರುಶನವ ನೀಡಮ್ಮ
ಏಳಮ್ಮ ಬೆಳಗಾಯಿತು ||೧||
ಬಾನಿನಲಿ ಹೊಂಗಿರಣ ಮೂಡುತಿಹುದು ತಾಯೆ |
ಪಕ್ಷಿಗಳ ಗಾನವು ತೇಲಿ ಬರುತಿಹುದು |
ಸೃಷ್ಠಿಯಾ ಶಕ್ತಿ ರೂಪವೇ ನೀನಾಗಿ |
ಮುಕ್ತಿಯ ನೀಡಲು ಏಳಮ್ಮಾ ತಾಯೆ |
ಏಳಮ್ಮ ಬೆಳಗಾಯಿತು | ಏಳಮ್ಮ ಬೆಳಗಾಯಿತು ||
ಏಳಮ್ಮ | ಏಳಮ್ಮ ||೨||
0 ಕಾಮೆಂಟ್‌ಗಳು