ಈ ಪರಿಯ ಸೊಬಗಾವ - Ee Pariya Sobagava

|| ದೇವರ ನಾಮ ||

 ರಚನೆ : ಪುರಂದರದಾಸರು




ಈ ಪರಿಯ ಸೊಬಗಾವ ದೇವರಲಿ ಕಾಣೆ

ಗೋಪೀಜನಪ್ರಿಯ ಗೋಪಾಲಗಲ್ಲದೆ


ದೊರೆಯತನದಲಿ ನೋಡೆ ಧರಣಿದೇವಿಗೆ 

ರಮಣ ಸಿರಿಯತನದಲಿ ನೋಡೆ ಈ ಕಾಂತನು 

ಹಿರಯತನದಲಿ ನೋಡೆ ಸರಸಿಜೋದ್ಭವನಯ್ಯ 

ಗುರುವುತನದಲಿ ನೋಡೆ ಜಗದಾದಿ ಗುರುವು ||೧||


ಪಾವನತ್ವದಿ ನೋಡೆ ಅಮರಗಂಗಾಜನಕ 

ದೇವತ್ವದಲಿ ನೋಡೆ ದಿವಿಜರೊಡೆಯ 

ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ 

ಆವ ಧೈರ್ಯದಿ ನೋಡೆ ಅಸುರಾಂತಕ ||೨||


ಗಗನದಲಿ ಸಂಚರಿಪ ಗರುಡದೇವನ 

ತುರಗ ಜಗತೀರ ಶೇಷ ಪರಿಯಂಕ 

ಶಯನ ನಿಗಮಗೋಚರ ಪುರಂದರವಿಠಲಗಲ್ಲದೆ

ಮಿಗಿಲಾದ ದೈವಗಳಿಗೀ ಭಾಗ್ಯವುಂಟೆ||೩||

 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು