|| ರಾಮ ಭಜನೆ ||
ರಾಮ ಪಾಲಿಸೋ ರಘುರಾಮ ಪಾಲಿಸೋ
ಸೋಮಶೇಖರಪ್ರಿಯ ಬಂದೆನ್ನ ರಕ್ಷಿಸೊ
ತಾಮಸ ಮಾಡದೆ ಬಂದು ನೀನು ಹರಸೊ ||
ರಘುಕುಲೋತ್ತಮನೆ ಶಿವಧನು ಭಂಜನನೆ
ಅಘಗಳ ಹರಿಸೊ ಹೇ ಪುರುಷೋತ್ತಮನೆ
ಅಘಹರ ಸ್ವಾಮಿ ಅಘಾಟ ರಾಜಾರಾಮನೆ ||
ಅಗಣಿತ ಮಹಿಮ ಸುಗುಣವಂತ ರಾಮನೆ
ನಿಗಮಕೆ ಸಿಲುಕದ ಸದಭಿಮಾನಿಯು ನೀನೆ
ಅಗಣ್ಯ ನಿನ್ನ ಚರಿತೆ ಎಂತು ಉಸುರಬಲ್ಲೆನೆ ||
ತನುಮನ ಧನವೆಲ್ಲ ನಿನಗೆ ಅರ್ಪಿತ ರಾಮ
ಅನುದಿನ ನಿನ್ನ ಸ್ಮರಿಪ ಮನ ನೀಡು ರಾಮ
ಭಾನುವಂಶ ಲಲಾಮ ಸಾಧುವಂದಿತ ರಾಮ ||
ಪಾಹಿರಾಮ ಪಾಹಿ ಪಾದಸೇವೆ ಕರುಣಿಸೊ ತ್ರಾ
ಹಿಯೆಂದು ಬೇಡುವೆ ಎನ್ಕೊರೆ ಆಲಿಸೊ
ದೇಹಿಶ್ಯಾಮ ನಿನ್ನ ನಾಮಸುಧೆ ಅನುಗ್ರಹಿಸೊ ||
0 ಕಾಮೆಂಟ್ಗಳು