|| ಗುರು ಮಹಿಮಾ ಸ್ತುತಿ ||
ಮಾಡಿದೈ ಶ್ರೀಗುರುವೆ ಮಾಡಿದೈ
ಮಾಡಿದೈ ಶ್ರೀಗುರುವೆ ಮಾಡಿದೈ
ಮಾಡಿದೈ ಶ್ರೀಗುರುವೆ ಮಾಡಿದೈ | |ಪ||
ತೊಡಗಿದ ಮರವೆಯ ಕೆಡಿಸಿ | ಮುನ್ನಿ |
ನೊಡಲಿನ ತೊಡಕನು ಬಿಡಿಸಿ |
ಕರ್ಮಕ್ಕೊಡೆಯದ ಕವಚವ ತೊಡಿಸಿ | ಮುಂದೆ |
ಪೊಡವಿಯೊಳವ | ರೊಡಗೂಡಿ ಮಾಡುವ |
ಕೆಡುತನಗಳನೆಲ್ಲ | ಗುಡಿಸುವೊ ವೀರನ |
ಮಾಡಿದೈ ಶ್ರೀಗುರುವೇ ಮಾಡಿದೈ | |1||
ಮರಣ ಭೀತಿಯ ಕೊಚ್ಚಿ ಕೇರಿ | ದೊಡ್ಡ |
ಸುರಪದಂಗಳನೆಲ್ಲತೂರಿ | ದುಃಖ |
ಬೆರೆಯದಾನಂದವ ತೋರಿ | ಮುಂದೆ |
ದುರುಳರಂತರ ದುಃಖದುರಿ ಬಂದು ಕವಿದರು |
ಕರಗದೆ ಕರಿಯ ಕಲ್ಲರೆಯಂತೆ ಚಿತ್ತವ ||
ಮಾಡಿದೈ ಶ್ರೀಗುರುವೆ ಮಾಡಿದೆ | |2| |
ಬಂಧನ ಬಂದ ಬಗೆಯನು | ಕರ್ಮ |
ದಿಂದದು ಕೆಡದ ಪರಿಯನು | ನಿಜಾ |
ನಂದದೊಳಿರುವ ಸಾರವನು | ತೋರಿ |
ಸಂದಿಗೊಂದಿನೊಳಿರ್ದ ಸಂದೇಹಂಗಳ ಕೊಂದು |
ತಂದೆ ಗುರು ಶಂಕರನೋಳ್ |
ಹೊಂದಿ ಬೆಳಗುವಂತೆ | | ಮಾಡಿದೈ ||3||

0 ಕಾಮೆಂಟ್‌ಗಳು