|| ಶಂಕರಾನಂದ ಪದ್ಧತಿ ||
ಗುರುದೇವ ನೀನೋರ್ವ ನಿಜ ದೇವನೈ
ಗುರುದೇವ ನೀನೋರ್ವ ನಿಜ ದೇವನೈ
ಗುರುದೇವ ನೀನೋರ್ವ ನಿಜ ದೇವನೈ | ನಿನ್ನ |
ಚರಣದೋಳ್ಮೆರೆಯದ | ನರನೆ ಪಾಮರನೈ |
ಗುರುದೇವ ||ಪ||
ತಿರುಕನಂದದಿ ಪುರ ಪುರಗಳ ತಿರುಗುತ |
ನರಳುವ ತರಳನ ಹರನ ಮೀರಿಸಿದೈ |
ಗುರುದೇವ ||1||
ಕರಣವ ಕರಗಿಸಿ ಮರುಗಿದ ಮುನಿಗಳು |
ಅರಸಿ ತಾವರಿಯದ ಸಿರಿಯ ತೋರಿಸಿದೈ ||
ಗುರುದೇವ ||2||
ಗುರುಶಂಕರನೆ ಕರುಣ ತೋರಲು ತಾನೆ |
ಗುರುವೆಂಬ ನಾಮವ ಧರಿಸಿ ಬಂದಿಹನೈ ||
ಗುರುದೇವ ||3||

0 ಕಾಮೆಂಟ್‌ಗಳು