ಗುರುಪಾದದೊಳು ಮನವಿಂಗಿ - Guru Padadolu Manavingi

|| ಗುರು ಮಹಿಮಾ ಸ್ತುತಿ ||

 ಶಂಕರಾನಂದ ಪದ್ಧತಿ 



ಗುರುಪಾದದೊಳು ಮನವಿಂಗಿ

ಗುರುಪಾದದೊಳು ಮನವಿಂಗಿ

ಗುರುಪಾದದೊಳು ಮನವಿಂಗಿ | ಬಂಧ

ತೊರದು ಪೋಯಿತು ನೋಡೆ ತಂಗಿ |

ಹೊರಗೆಂಬವಳಗೆಂಬ | ಹೊರವಳಸಂದೆಂಬ |

ಬಿರುಕಿನೊಳೆನ್ನ ತುಂಬಿರುವಂತೆ ಮಾಡಿದ|ಗುರು||ಪ||


ತಾಪಕೋಪಂಗಳ ಕೆಡಿಸಿ | ಬಳಿಕ |

ರೂಪು ನಾಮಂಗಳ ಸುಡಿಸಿ |

ದೂಪದೀಪಗಳೆಂಬಾ | ರೋಪವೆಲ್ಲವನು ನಿ|

ರ್ಲೇಪವೆನಿಸಿ ನೀ ಚಿ|ದ್ರೂಪನೆಂದರುಪಿದ||ಗುರು||1||


ತನ್ನಾನಂದದ ಸಾರ ಬೆಸಗಿ | ಮನ |

ವಿನ್ನೆಲ್ಲು ಪೋಗದಂತೆಸಗಿ |

ಭಿನ್ನವೆಂಬುವ ನುಡಿ ಶೂನ್ಯವಾಯಿತು ಯೆಂಬ |

ಯೆನ್ನಲ್ಲಿಯೆ ಜಗವೆನ್ನಲ್ಲಿ ತೋರಿದ||ಗುರು||2||


ಗುರುವೆಂಬ ನಾಮವ ಧರಿಸಿ | ಹೊಟ್ಟೆ |

ಹೊರೆಯುವ ಜನ್ಮವ ಹರಿಸಿ |

ಹರುಷವನೇರಿಸಿ ಹರನೊಳು ಸೇರಿಸಿ |

ಮರಣ ಜನ್ಮಂಗಳ ಗೋ|ಚರಿಸದಂತೆಸಗಿದ||ಗುರು||3||


ಮೂರು ಮೂರ್ತಿಗಳಲ್ಲು ಕೂಡಿ | ನಾ |

ಸೇರಿಕೊಂಡಿರುವಂತೆ ಮಾಡಿ |

ತೋರುವ ಬಗೆಯನು ತೋರಿಸಿ ನಮ್ಮಲ್ಲೇ |

ತೋರಿಸಿ ಬೇರೇನು ತೋರದಂತೆಸಗಿದ ||4||


ಮರಣ ಜನ್ಮಂಗಳ ಸುಟ್ಟು | ನಿಜ |

ಗುರು ದೂಷಕರಿಗಿದ ಕೊಟ್ಟು |

ಮರವೆಯ ಬ್ಯಾರಿಟ್ಟು ಅರುಹಿಗೆ ಬ್ಯಾರಿಟ್ಟು |

ಗುರು ಶಂಕರನ ಗುಟ್ಟು|ಅರಿಯದವನ ಬಿಟ್ಟು||ಗುರು||5||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು